ಕಹಿಬೇವು ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಯುಗಾದಿ ಹಬ್ಬ ಬಂತು ಅಂದ್ರಂತೂ ಎಲ್ಲರ ಮನೆಯಲ್ಲಿ ಕಹಿಬೇವು ಇರುತ್ತೆ. ಈ ಕಹಿಬೇವು ಆರೋಗ್ಯಕ್ಕೆ ತುಂಬಾನೇ ಉಪಕಾರಿ ಅಂತಾ ಆರ್ಯುವೇದ ಹೇಳಿದೆ. ಅಂತೆಯೇ ತ್ವಚೆಯ ಆರೈಕೆಗೂ ಕಹಿಬೇವು ತುಂಬಾನೇ ಸಹಕಾರಿ.
ಮುಖದಲ್ಲಿನ ಮೊಡವೆ ಕಲೆಗಳನ್ನ ನಿವಾರಣೆ ಮಾಡೋದ್ರಲ್ಲಿ ಕಹಿಬೇವಿನ ಎಲೆ ಪ್ರಮುಖ ಪಾತ್ರ ವಹಿಸುತ್ತೆ .
ಇದಕ್ಕಾಗಿ ನೀವು ಕಹಿಬೇವು ಎಲೆಗಳನ್ನ ಒಣಗಿಸಿ ಬಳಿಕ ಅದನ್ನ ಪೌಡರ್ ರೀತಿ ರುಬ್ಬಿಟ್ಟುಕೊಳ್ಳಿ. ಇದಕ್ಕೆ ನಿತ್ಯ ರೋಸ್ ವಾಟರ್ ಇಲ್ಲವೇ ನೀರನ್ನ ಹಾಕಿ ನಿತ್ಯ ಮುಖಕ್ಕೆ ಹಚ್ಚಿಕೊಳ್ಳಿ. ಕೆಲ ನಿಮಿಷಗಳಲ್ಲೇ ಮುಖವನ್ನ ತೊಳೆದುಕೊಳ್ಳಿ. ಈ ರೀತಿ ಮಾಡೋದ್ರಿಂದ ಮೊಡವೆ ಕಲೆಗಳು ಮಂಗಮಾಯವಾಗುತ್ತೆ.
ಒಂದು ಲೀಟರ್ ನೀರಿನಲ್ಲಿ ಒಂದು ಮುಷ್ಟಿಯಷ್ಟು ಕಹಿಬೇವು ಹಾಕಿ ಬೇಯಿಸಿ. ನೀರಿನ ಬಣ್ಣ ಬದಲಾಗುತ್ತಿದ್ದಂತೆ ಎಲೆಯನ್ನ ತೆಗೆದು ಆ ನೀರನ್ನ ಬಾಟಲ್ ನಲ್ಲಿ ತುಂಬಿಟ್ಟುಕೊಳ್ಳಿ. ಇದನ್ನ ನೀವು ಟೋನರ್ ರೀತಿ ಬಳಸಬಹುದು. ನಿತ್ಯ ಮಲಗುವ ಮುನ್ನ ಇದನ್ನ ಮುಖಕ್ಕೆ ಹಚ್ಚಿಕೊಂಡು ಮಲಗೋದ್ರಿಂದ ವೈಟ್ಹೆಡ್ಸ್, ಬ್ಲಾಕ್ ಹೆಡ್ಸ್ ಸಮಸ್ಯೆಯಿಂದ ಪಾರಾಗಬಹುದು.
ಕಹಿಬೇವಿನ ಎಣ್ಣೆಯನ್ನ ನಿತ್ಯ ಮಲಗುವ ಮುನ್ನ ಮುಖಕ್ಕೆ ಲೇಪಿಸಿ ಬೆಳಗ್ಗೆ ತಣ್ಣೀರಿನಿಂದ ವಾಶ್ ಮಾಡಿ. ಇದ್ರಿಂದ ನಿಮ್ಮ ಮುಖದ ಕಾಂತಿ ಇನ್ನಷ್ಟು ಹೆಚ್ಚಲಿದೆ. ಫಂಗಸ್ ಸೋಂಕು ತಾಕಿದ ಉಗುರಿಗೆ ಈ ಎಣ್ಣೆಯಿಂದ ಮಸಾಜ್ ಮಾಡೋದ್ರಿಂದ ಫಂಗಸ್ ಸೋಂಕು ಕಡಿಮೆಯಾಗಲಿದೆ.
ಮುಖ ಶ್ವೇತವರ್ಣ ಆಗಬೇಕು ಅಂದ್ರೂನೂ ನೀವು ಕಹಿಬೇವು ಬಳಕೆ ಮಾಡಬಹುದು. ಇದಕ್ಕಾಗಿ ನೀವು ಕಹಿಬೇವನ್ನ ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ಬಳಿಕ ಇದನ್ನ ಪೌಡರ್ ಮಾಡಿಕೊಳ್ಳಿ. ಇದಕ್ಕೆ ರೋಸ್ ವಾಟರ್, ಮೊಸರು ಹಾಗೂ ಸ್ವಲ್ಪ ಹಾಲನ್ನ ಸೇರಿಸಿ ಪೇಸ್ಟ್ ಮಾಡಿ. ಇದನ್ನ ನಿತ್ಯ ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ಬಳಿಕ ವಾಶ್ ಮಾಡಿ. ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ನಿಮಗೆ ತಿಳಿಯಲಿದೆ.