![](https://kannadadunia.com/wp-content/uploads/2016/11/06_08_2016-intelligent-child.jpg)
ಇಂದಿನ ಕಾಲದಲ್ಲಿ ಯಾರಿಗೂ ಸಮಯವಿಲ್ಲ. ಮಕ್ಕಳ ಜೊತೆ ಸರಿಯಾಗಿ ಸಮಯ ಕಳೆಯಲು ಪಾಲಕರಿಗೆ ಆಗ್ತಾ ಇಲ್ಲ. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದಲ್ಲಿ ಮುಗಿದು ಹೋಯ್ತು. ಮನೋವಿಜ್ಞಾನಿಗಳ ಪ್ರಕಾರ ಪಾಲಕರು ಮಕ್ಕಳ ಜೊತೆ ಸಮಯ ಕಳೆಯುವುದು ಬಹಳ ಅವಶ್ಯಕ. ಇದರಿಂದ ಅನೇಕ ಲಾಭಗಳಿವೆ ಎನ್ನುತ್ತಾರೆ ಮನೋವಿಜ್ಞಾನಿಗಳು.
ಮಕ್ಕಳಿಗೆ ಸರಿಯಾಗಿ ಮಾರ್ಗದರ್ಶನ ಮಾಡಬೇಕು. ಜ್ಞಾನ ಹೆಚ್ಚು ಮಾಡುವ, ಗೊಂಬೆಗಳನ್ನು ನೀಡಿ ಸಮಯದ ಸದುಪಯೋಗ ಮಾಡಿಕೊಳ್ಳುವುದನ್ನು ಕಲಿಸಿ.
ಮಕ್ಕಳಿಗೆ ಓದುವಂತೆ ಒತ್ತಡ ಹೇರಬೇಡಿ. ಸ್ಕೂಲಿನಲ್ಲಿ ಶಿಕ್ಷಕರು ಶಿಕ್ಷೆ ನೀಡ್ತಾರೆ, ಸ್ಕೂಲಿನಿಂದ ಹೊರಗೆ ಹಾಕ್ತಾರೆ ಎಂದೆಲ್ಲ ಭಯ ಹುಟ್ಟಿಸಬೇಡಿ. ನಂಬರ್ ಹಿಂದೆ ಬೀಳುವಂತೆ ಅವರಿಗೆ ಒತ್ತಡ ತರಬೇಡಿ.
ಮಾರುಕಟ್ಟೆಯಲ್ಲಿ ಯಾವುದಾದ್ರೂ ಆಟಿಕೆ ಬೇಕೆಂದು ಮಕ್ಕಳು ಹಠ ಹಿಡಿದಲ್ಲಿ ತಕ್ಷಣ ಖರೀದಿ ಮಾಡಬೇಡಿ. ಹಠ ಮಾಡಿದ್ರೆ ಎಲ್ಲವೂ ಸಿಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಿ.
ಬೇರೆ ಮಕ್ಕಳ ಜೊತೆ ನಿಮ್ಮ ಮಕ್ಕಳ ಹೋಲಿಕೆ ಮಾಡಬೇಡಿ. ಯಾವುದೇ ವಿಚಾರಕ್ಕೂ ನಿಮ್ಮ ಹಾಗೂ ಕುಟುಂಬ ಇಲ್ಲವೆ ಹೊರಗಿನ ಮಕ್ಕಳ ಜೊತೆ ಹೋಲಿಕೆ ಬೇಡ.
ಬಾಲ್ಯದಿಂದಲೇ ಉಳಿತಾಯದ ಬಗ್ಗೆ ಮಕ್ಕಳಿಗೆ ಕಲಿಸಿ. ಹಣವನ್ನು ಸಣ್ಣ ಡಬ್ಬದಲ್ಲಿಡುವುದನ್ನು ರೂಢಿ ಮಾಡಿಸಿ.
ತಮ್ಮ ಆಟಿಕೆಗಳನ್ನು ಇತರ ಮಕ್ಕಳಿಗೂ ನೀಡಿ ಆಟ ಆಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ.
ಪಾಲಕರ ನಡವಳಿಕೆಯನ್ನು ಮಕ್ಕಳು ಅನುಸರಿಸುತ್ತಾರೆ. ಹಾಗಾಗಿ ಮಕ್ಕಳ ಮುಂದೆ ಮಾತನಾಡುವಾಗ ಗಮನವಿರಲಿ.
ಮನೆಯ ಹಿರಿಯರಿಗೆ ನೆರವಾಗುವುದು, ಅವರಿಗೆ ಗೌರವ ನೀಡುವುದು ಹಾಗೂ ಸಭ್ಯತೆಯಿಂದ ನಡೆದುಕೊಳ್ಳುವುದನ್ನು ಕಲಿಸಿ.