
ನಾರ್ಮಲ್ ಡೆಲಿವರಿ ಆಗಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ಇಲ್ಲಿ ಕೇಳಿ. ನಿಮಗಾಗಿ ಒಂದಿಷ್ಟು ಟಿಪ್ಸ್ ಇಲ್ಲಿದೆ.
ನಿಯಮಿತವಾಗಿ ವ್ಯಾಯಾಮ ಮಾಡಿ. ಒಂದೆಡೆ ಕುಳಿತುಕೊಳ್ಳುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ಇತರ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಕೈಲಾಗುವ ಸಣ್ಣ ಪುಟ್ಟ ಕೆಲಸ ಮಾಡಿ. ಸರಳ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಸೊಂಟದ ಭಾಗದ ಮಾಂಸ ಖಂಡಗಳು ಸಲೀಸಾಗುವಂಥ ವ್ಯಾಯಾಮ ಕಲಿಯಿರಿ. ಇದನ್ನು ತಜ್ಞರಿಂದ ಕೇಳಿ ಕಲಿಯುವುದೇ ಒಳ್ಳೆಯದು.
ಆರೋಗ್ಯಕರ ಆಹಾರ ಸೇವಿಸುವುದೂ ಬಹಳ ಮುಖ್ಯ. ಕಣ್ಣಿಗೆ ಬಿದ್ದ ಎಲ್ಲಾ ವಸ್ತುಗಳನ್ನು ತಿನ್ನದಿರಿ. ಜಂಕ್ ಫುಡ್, ಎಣ್ಣೆಯಲ್ಲಿ ಕರಿದ ವಸ್ತುಗಳನ್ನು ಸಾಧ್ಯವಾದಷ್ಟು ದೂರಮಾಡಿ. ಪೌಷ್ಟಿಕ ಆಹಾರಕ್ಕೆ ಮೊದಲ ಆದ್ಯತೆ ಇರಲಿ. ತಾಜಾ ಹಣ್ಣು ತರಕಾರಿ ಸೇವಿಸಿ. ಹೆಚ್ಚಿನ ದ್ರವಾಹಾರಕ್ಕೆ ಮಹತ್ವ ನೀಡಿ. ಅತಿಯಾದ ಕೊಬ್ಬಿನ ಅಂಶದ ಸೇವನೆಯೂ ಒಳ್ಳೆಯದಲ್ಲ.
ಅನಾವಶ್ಯಕ ಚಿಂತೆಗಳನ್ನು ತಲೆಗೆ ಹಚ್ಚಿಕೊಂಡು ಕೊರಗದಿರಿ. ಭಯ ಪಟ್ಟರೂ ಮಗುವಿನ ಮೇಲೆ ಆಘಾತವಾಗುತ್ತದೆ. ಸಕಾರಾತ್ಮಕ ಆಲೋಚನೆಗಳಿಗೆ ಮಾತ್ರ ಮಹತ್ವ ಕೊಡಿ. ಕಣ್ತುಂಬಾ ನಿದ್ರಿಸಿ. ದೇಹಾಯಾಸವನ್ನೂ ಇದು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
ರಾತ್ರಿ ಮಲಗುವ ಮುನ್ನ, ಬೆಳಿಗ್ಗೆ ಎದ್ದಾಕ್ಷಣ ಚಹಾ – ಕಾಫಿ ಕುಡಿಯದಿರಿ. ತಜ್ಞರ ಬಳಿ ಕೇಳಿ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಕಲಿಯಿರಿ. ಹೆರಿಗೆ ಸಮಯದಲ್ಲಿ ಹೆಚ್ಚು ಹೊತ್ತು ಉಸಿರು ಬಿಗಿ ಹಿಡಿಯಬೇಕಾಗುತ್ತದೆ. ಇದಕ್ಕೆ ನೆರವಾಗುವ ಧ್ಯಾನ ಯೋಗ ಮೊದಲೇ ಮಾಡುವುದು ಒಳ್ಳೆಯದು. ನಿತ್ಯ ಕನಿಷ್ಠ 10 ಲೋಟ ನೀರು ಕುಡಿಯಿರಿ.