ಪ್ರತಿಯೊಬ್ಬರೂ ಲಕ್ಷ್ಮಿ ಆಶೀರ್ವಾದವನ್ನು ಬಯಸ್ತಾರೆ. ಲಕ್ಷ್ಮಿ ಕೃಪೆ ತಮ್ಮ ಮೇಲಿರಬೇಕೆಂದು ಬಯಸುತ್ತಾರೆ. ಲಕ್ಷ್ಮಿ ಸದಾ ಮನೆಯಲ್ಲಿರಲೆಂದು ಅನೇಕ ಪೂಜೆ, ಆರಾಧನೆ ಮಾಡ್ತಾರೆ. ಆದ್ರೆ ದಿನನಿತ್ಯ ಮಾಡುವ ಕೆಲವೊಂದು ತಪ್ಪಿನಿಂದಾಗಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ. ಕೈನಲ್ಲಿ ಹಣ ನಿಲ್ಲುವುದಿಲ್ಲ.
ತಾಯಿ ಲಕ್ಷ್ಮಿ ತಡವಾಗಿ ಏಳುವುದನ್ನು ಇಷ್ಟಪಡುವುದಿಲ್ಲ. ಪುರಾಣಗಳಲ್ಲಿ ಕೂಡ ಬೆಳಿಗ್ಗೆ ಬೇಗ ಏಳಬೇಕೆಂದು ಸಲಹೆ ನೀಡಲಾಗಿದೆ. ಸೂರ್ಯೋದಯದ ನಂತ್ರ ಹಾಗೂ ಸೂರ್ಯಾಸ್ತದ ವೇಳೆ ಮಲಗುವುದು ಲಕ್ಷ್ಮಿಗೆ ಇಷ್ಟವಾಗುವುದಿಲ್ಲ.
ಆಹಾರವನ್ನು ಗೌರವಿಸಬೇಕು. ಊಟ ಮಾಡುವಾಗ ಮಧ್ಯದಲ್ಲಿ ಬಿಡುವುದು ಸೂಕ್ತವಲ್ಲ. ಊಟ ಮುಗಿದ ನಂತ್ರ ಏಳಬೇಕು. ಈ ಅಭ್ಯಾಸ ಕೂಡ ತಾಯಿ ಲಕ್ಷ್ಮಿಯ ಕೋಪಕ್ಕೆ ಕಾರಣವಾಗುತ್ತದೆ.
ರಾತ್ರಿ ಕೂದಲು ಬಾಚಬಾರದು. ಹಾಗೆ ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು. ಇದ್ರಿಂದ ತಾಯಿ ಕೋಪಕೊಳ್ತಾಳೆ.
ತಾಯಿ ಲಕ್ಷ್ಮಿಗೆ ಕೆಂಪು ಹಾಗೂ ಕಮಲದ ಹೂವನ್ನು ಅರ್ಪಿಸಬೇಕು. ಬಿಳಿ ಹೂವನ್ನು ತಾಯಿ ಲಕ್ಷ್ಮಿಗೆ ಅರ್ಪಿಸಬಾರದು. ಇದು ಲಕ್ಷ್ಮಿ ಮುನಿಸಿಗೆ ಕಾರಣವಾಗುತ್ತದೆ. ಆರ್ಥಿಕ ನಷ್ಟವುಂಟಾಗುತ್ತದೆ.
ಉಪ್ಪನ್ನು ಯಾವುದೇ ಕಾರಣಕ್ಕೂ ಕೈನಲ್ಲಿ ನೀಡಬೇಡಿ. ಒಂದು ಪಾತ್ರೆಯಲ್ಲಿ ಹಾಕಿ ಉಪ್ಪನ್ನು ನೀಡಬೇಕು. ಹಾಗೆ ರಾತ್ರಿ, ಸಂಜೆ ಸಮಯದಲ್ಲಿ ಉಪ್ಪನ್ನು ನೀಡಬಾರದು.