ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ ತಿಂಗಳಿನಲ್ಲಿ ಹೋಳಿ ಆಚರಿಸಲಾಗ್ತಿದೆ. ಈ ಹಬ್ಬವನ್ನು ಬಣ್ಣಗಳ ಹಬ್ಬವೆಂದು ಕರೆಯಲಾಗುತ್ತದೆ. ಉತ್ತರ ಭಾರತ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆರ್ಥಿಕ ಸಮಸ್ಯೆಯಿಂದ ಬಳಲುವವರು ಹೋಳಿ ದಿನ ಪರಿಹಾರ ಕಂಡುಕೊಳ್ಳಬಹುದು. ಹಣದ ಸಮಸ್ಯೆಯಿರುವವರು ಅವಶ್ಯಕವಾಗಿ ಈ ಕೆಲಸ ಮಾಡಬೇಕು.
ಆರ್ಥಿಕ ಸಮಸ್ಯೆಯಿಂದ ಮುಕ್ತಿ ಬಯಸುವವರು ಹೋಳಿ ದಿನ ರಾತ್ರಿ ಚಂದ್ರನ ಬೆಳಕು ಬೀಳುವ ಜಾಗದಲ್ಲಿ ನಿಂತುಕೊಳ್ಳಿ. ಚಂದ್ರನನ್ನು ಧ್ಯಾನಿಸುತ್ತ ಬೆಳ್ಳಿಯ ತಟ್ಟೆಯಲ್ಲಿ ಶುದ್ಧ ತುಪ್ಪದಿಂದ ದೀಪ ಹಚ್ಚಿ, ಧೂಪವನ್ನು ಬೆಳಗಿ.
ಇದಾದ ನಂತ್ರ ಹಾಲಿನ ಅರ್ಘ್ಯವನ್ನು ಅರ್ಪಿಸಿ. ಇಲ್ಲವಾದ್ರೆ ಬಿಳಿ ಬಣ್ಣದ ಖೀರನ್ನು ಅರ್ಪಿಸಿ. ಇದಾದ ನಂತ್ರ ಆರ್ಥಿಕ ಸಮಸ್ಯೆ ಬಗೆಹರಿಸುವಂತೆ ಚಂದ್ರನಲ್ಲಿ ಪ್ರಾರ್ಥಿಸಿ. ನಂತ್ರ ಪ್ರಸಾದವನ್ನು ಮಕ್ಕಳಿಗೆ ನೀಡಿ. ಇದಾದ ನಂತ್ರ ಬರುವ ಹುಣ್ಣಿಮೆಯಂದು ಹಾಲನ್ನು ಅರ್ಪಿಸಿ. ಕೆಲವೇ ದಿನಗಳಲ್ಲಿ ಆರ್ಥಿಕ ಸಮಸ್ಯೆ ದೂರವಾಗುವುದನ್ನು ನೀವು ನೋಡಬಹುದು.