ಬೆಳ್ಳಗಾಗಬೇಕೆಂಬುದು ಬಹುತೇಕರ ಬಯಕೆ. ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡುವವರನ್ನು ನೋಡಿರುತ್ತೀರಿ. ದುಬಾರಿ ಕ್ರೀಮ್ ಗಳಿಗೆ ದುಡ್ಡು ಸುರಿದು ಫಲಿತಾಂಶ ಸಿಗದೆ ಕೈ ಸುಟ್ಟುಕೊಂಡಿರುತ್ತಾರೆ.
ಕೊತ್ತೊಂಬರಿ ಸೊಪ್ಪಿನ ಫೇಸ್ ಪ್ಯಾಕ್ ಮಾಡಿಕೊಂಡರೆ ಹೊಳೆಯುವ ಮುಖ ಪಡೆದುಕೊಳ್ಳಬಹುದು. ನೈಸರ್ಗಿಕವಾಗಿ ಸಿಗುವ ಈ ಸೊಪ್ಪಿನಿಂದ ಮನೆಯಲ್ಲೇ ಫೇಸ್ ಪ್ಯಾಕ್ ತಯಾರಿಸಬಹುದು.
ಎಲ್ಲ ವಿಧದಿಂದ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಆದರೆ ಸೂಕ್ಷ್ಮ ವಿಧದ ಚರ್ಮ ಹೊಂದಿದವರು ಇದನ್ನು ಬಳಸುವಾಗ ಎಚ್ಚರ ವಹಿಸಬೇಕು. ಮೊಡವೆ ಕಪ್ಪುಕಲೆ ಮತ್ತು ಸೋಂಕುಗಳಿಗೆ ಈ ಕೊತ್ತೊಂಬರಿ ಸೊಪ್ಪು ಲಾಭದಾಯಕ.
ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಬಳಿಕ ಅದಕ್ಕೆ 5 ರಿಂದ 6 ಚಮಚ ಟೊಮೊಟೊ ರಸ ಮತ್ತು ನಿಂಬೆರಸ ಹಾಗೂ ಅರ್ಧ ಚಮಚ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ ಚೆನ್ನಾಗಿ ಕಲಸಿ ಫೇಸ್ ಪ್ಯಾಕ್ ತಯಾರಿಸಿ. ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅದು ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಹೀಗೆ ವಾರದಲ್ಲಿ ಒಮ್ಮೆ ಮಾಡುವುದರಿಂದ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.