ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದಕ್ಕೂ ಶಕ್ತಿ ಇರುತ್ತದೆ. ಅದು ಧನಾತ್ಮಕ ಶಕ್ತಿ ಅಥವಾ ನಕಾರಾತ್ಮಕ ಶಕ್ತಿ. ಇದೇ ಕಾರಣಕ್ಕೆ ಮನೆ ಅಥವಾ ಕಚೇರಿಯ ಸುತ್ತ ನೆಗೆಟಿವ್ ಎನರ್ಜಿ ತರುವಂತಹ ಯಾವ ವಸ್ತುವನ್ನೂ ಇಟ್ಟುಕೊಳ್ಳಬಾರದು. ನಕಾರಾತ್ಮಕ ಶಕ್ತಿಯು ಹಣಕಾಸಿನ ತೊಂದರೆ, ಪ್ರಗತಿಯಲ್ಲಿ ಅಡಚಣೆ, ಅನಾರೋಗ್ಯ ಮತ್ತು ಸಂಬಂಧಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸಕಾರಾತ್ಮಕ ಶಕ್ತಿಯಿದ್ದರೆ ಅದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ವಾಸ್ತು ಶಾಸ್ತ್ರದಲ್ಲಿ ಕೆಲವು ಮರಗಳು ಮತ್ತು ಸಸ್ಯಗಳು, ಸಂಪತ್ತನ್ನು ಗಳಿಸಲು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಗಿಡಗಳು ಮನೆಯಲ್ಲಿದ್ದರೆ ಹಣವು ಅಯಸ್ಕಾಂತದಂತೆ ಆಕರ್ಷಿತವಾಗುತ್ತದೆ. 2024ನೇ ವರ್ಷ ಇನ್ನೇನು ಬಂದೇಬಿಡ್ತು. ಮುಂದಿನ ವರ್ಷ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬಯಸಿದರೆ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಸಸ್ಯಗಳನ್ನು ಮನೆಯಲ್ಲಿ ನೆಡಬೇಕು.
ಹಣವನ್ನು ಆಕರ್ಷಿಸುತ್ತವೆ ಈ ಸಸ್ಯಗಳು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈ ಸಸ್ಯಗಳನ್ನು ಹೊಂದಿದ್ದರೆ ವಾತಾವರಣದಲ್ಲಿ ಸಕಾರಾತ್ಮಕತೆ ಮತ್ತು ತಾಜಾತನ ಹೆಚ್ಚುತ್ತದೆ. ಇದು ಮನೆಯಲ್ಲಿ ಹಣದ ಒಳಹರಿವನ್ನು ಹೆಚ್ಚಿಸುತ್ತದೆ. ಕುಟುಂಬ ಸದಸ್ಯರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಒದಗಿಸುತ್ತದೆ.
ರಾತ್ರಿರಾಣಿ : ಮನೆಯಲ್ಲಿ ರಾತ್ರಿರಾಣಿ ಗಿಡವನ್ನು ನೆಡಬೇಕು. ಈ ಹೂವುಗಳು ಇಡೀ ವಾತಾವರಣಕ್ಕೆ ಪರಿಮಳವನ್ನು ನೀಡುತ್ತವೆ. ಇವುಗಳ ಸುಗಂಧ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಸಂತೋಷ, ಶಾಂತಿಯನ್ನು ತರುತ್ತದೆ. ಕುಟುಂಬ ಸದಸ್ಯರ ನಡುವೆ ಪ್ರೀತಿ ಮತ್ತು ವೈವಾಹಿಕ ಸಂತೋಷವನ್ನು ಹೆಚ್ಚಿಸುತ್ತದೆ. ಪ್ರಗತಿ ಮತ್ತು ಸಂಪತ್ತು ಗಳಿಸಲು ಹೊಸ ಮಾರ್ಗಗಳನ್ನು ನಮ್ಮೆದುರು ತೆರೆದಿಡುತ್ತದೆ.
ಚಂಪಾ: ಚಂಪಾ ಗಿಡಗಳ ವಿಶೇಷತೆ ಎಂದರೆ ಇವು ಸದಾ ಹಸಿರಾಗಿಯೇ ಇರುತ್ತವೆ. ಇದರ ತಿಳಿ ಹಳದಿ ಹೂವುಗಳು ಸುಂದರವಾಗಿರುತ್ತವೆ ಮತ್ತು ನಕಾರಾತ್ಮಕ ಶಕ್ತಿಯನ್ನು ತ್ವರಿತವಾಗಿ ನಿವಾರಿಸುತ್ತವೆ. ಚಂಪಾ ಗಿಡ ಇರುವ ಮನೆಯಲ್ಲಿ ಸದಾ ಸಕಾರಾತ್ಮಕತೆ ಇರುತ್ತದೆ. ಕುಟುಂಬದ ಸದಸ್ಯರ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಅವರು ಯಾವಾಗಲೂ ಸಂತೋಷದಿಂದ ಇರುತ್ತಾರೆ.
ಮಲ್ಲಿಗೆ: ಮಲ್ಲಿಗೆ ಗಿಡವು ಅದರ ಆಹ್ಲಾದಕರ ಪರಿಮಳ ಮತ್ತು ಸುಂದರವಾದ ಹೂವುಗಳಿಗೆ ಹೆಸರುವಾಸಿಯಾಗಿದೆ. ಮಲ್ಲಿಗೆ ಗಿಡವನ್ನು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಂಗಳದಲ್ಲಿ ನೆಡುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಅವರು ಪ್ರಗತಿ ಹೊಂದುತ್ತಾರೆ. ಆದಾಯದಲ್ಲೂ ಹೆಚ್ಚಳವಾಗುತ್ತದೆ.
ಪಾರಿಜಾತ : ಪಾರಿಜಾತದ ಹೂವುಗಳು ತುಂಬಾ ಸುಂದರವಾಗಿರುತ್ತವೆ. ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ಹೂವು ಇದು. ಪಾರಿಜಾತ ಗಿಡ ನೆಡುವುದರಿಂದ ನಮ್ಮೆಲ್ಲಾ ಆಸೆಗಳು ಈಡೇರುತ್ತವೆ. ಈ ಹೂವನ್ನು ಸ್ಪರ್ಷಿಸಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು. ಮನೆಯಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟು ಇರುವುದಿಲ್ಲ. ಬದಲಿಗೆ ಸಂಪತ್ತು ಹೆಚ್ಚುತ್ತಲೇ ಇರುತ್ತದೆ.