ಮನೆಯೆಂದ ಮೇಲೆ ಅಲ್ಲಿ ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ಇರುತ್ತದೆ. ಆದರೆ ಮನೆ ಮುಂದೆ ಅಥವಾ ಮನೆಯ ಒಳಗೆ ಕೆಲವು ಗಿಡಗಳು ಇದ್ದರೆ ಅದರಿಂದ ನಮ್ಮ ಕಷ್ಟಗಳೆಲ್ಲಾ ದೂರವಾಗಿ ನೆಮ್ಮದಿ ನೆಲೆಸುತ್ತದೆ ಅನ್ನುತ್ತಾರೆ ಜೋತಿಷ್ಯ ಪಂಡಿತರು.
ಅದರಲ್ಲಿ ಈ ಅಲೋವೆರಾ ಗಿಡ ಕೂಡ ಒಂದು. ಇದು ಚರ್ಮ, ಕೂದಲಿನ ರಕ್ಷಣೆಯನ್ನು ಮಾಡುವುದಲ್ಲದೇ ಮನೆಯ ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ. ಇದನ್ನು ಕೆಲವರು ಮನೆಯ ಎದುರುಗಡೆ ಬುಡ ಮೇಲೆ ಮಾಡಿ ನೇತಾಡಿಸುತ್ತಾರೆ. ಇದರಿಂದ ಮನೆಗೆ ಒಳ್ಳೆಯದು ಎನ್ನುತ್ತಾರೆ.
ಇದು ತುಂಬಾ ಪವಿತ್ರವಾದ ಗಿಡವಾಗಿದ್ದು, ಈ ಅಲೋವೆರಾ ಗಿಡ ಮನೆಯಲ್ಲಿ ಇದ್ದರೆ ದೇವತೆಗಳು ಮನೆಗೆ ಪ್ರವೇಶಿಸುತ್ತಾರಂತೆ. ಹಾಗೇ ಆ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲವಂತೆ. ಚಿಕ್ಕ ಪಾಟ್ ನಲ್ಲಿ ಹಾಕಿ ನೆಟ್ಟರೂ ಸಾಕು, ಇದು ತುಂಬಾ ಚೆನ್ನಾಗಿ ಬೆಳೆಯುತ್ತದೆ. ಆರೋಗ್ಯ ಹಾಗೂ ಅದೃಷ್ಟ ತರುವ ಈ ಗಿಡವನ್ನು ನಿಮ್ಮ ಮನೆಯ ಮುಂದೆ, ಹಿತ್ತಲು, ತೋಟದಲ್ಲಿಯೂ ಬೆಳೆಸಿ.