ಚಿಕ್ಕಬಳ್ಳಾಪುರ : ಬಿಜೆಪಿಗೆ ಮತ ನೀಡಿದ್ರೆ ‘ಗ್ಯಾರಂಟಿ ಯೋಜನೆ’ ಬಂದ್ ಆಗುತ್ತದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ನೀಡಿದ್ದಾರೆ.
ಬಾಗೇಪಲ್ಲಿಯಲ್ಲಿ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಓಟು ಹಾಕಬೇಡಿ, ಒಂದು ವೇಳೆ ಹಾಕಿದ್ರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಮತ ನೀಡದಿದ್ದರೆ ಗ್ಯಾರಂಟಿ ಯೋಜನೆ ರದ್ದು ಎಂದು ಹೇಳಿರುವ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದ್ದರೆ ಗ್ಯಾರಂಟಿ ಯೋಜನೆ ಮುಂದುವರೆಸುತ್ತೇವೆ. ಗೆಲ್ಲಿಸದೇ ಇದ್ದರೆ ಗ್ಯಾರಂಟಿ ಯೋಜನೆ ತಿರಸ್ಕಾರ ಮಾಡಿದ್ದಾರೆ ಅಂತ ಅಲ್ವಾ? ಎಂದು ಶಾಸಕ ಬಾಲಕೃಷ್ಣ ಮತದಾರರನ್ನು ಪ್ರಶ್ನಿಸಿದ್ದರು.
ಇದೀಗ ಯಾವುದೇ ಕಾರಣಕ್ಕೂ ಬಿಜೆಪಿಗೆ ಓಟು ಹಾಕಬೇಡಿ, ಒಂದು ವೇಳೆ ಹಾಕಿದ್ರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.