ಸರಿಯಾಗಿ ನಿದ್ರೆ ಇಲ್ಲದಿದ್ದರೆ, ಅಥವಾ ಮೊಬೈಲ್, ಟಿವಿ ಅತೀಯಾದ ವೀಕ್ಷಣೆಯಿಂದ ಕೂಡ ಕೆಲವೊಮ್ಮೆ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲ ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತೆ. ಇದರಿಂದ ಮುಖದ ಸೌಂದರ್ಯವೇ ಹಾಳಾಗುತ್ತದೆ.
ಕಣ್ಣಿನ ಕೆಳಭಾಗ ಸೂಕ್ಷ್ಮ ವಾಗಿರುವುದರಿಂದ ಹಾನಿಕಾರವಾದ ಕ್ರೀಂಗಳನ್ನು ಬಳಸಲು ಸಾಧ್ಯವಿಲ್ಲ. ಹಾಗಾಗಿ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಈ ಕಪ್ಪು ವರ್ತುಲವನ್ನು ಕಡಿಮೆ ಮಾಡಿಕೊಳ್ಳಬಹುದು.
2 ಟೇಬಲ್ ಸ್ಪೂನ್ ನಷ್ಟು ಮೊಸರು ತೆಗೆದುಕೊಳ್ಳಿ. ಅದಕ್ಕೆ ½ ಟೇಬಲ್ ಸ್ಪೂನ್ ನಷ್ಟು ಕಡಲೇ ಹಿಟ್ಟು, ½ ಟೀ ಸ್ಪೂನ್ ನಷ್ಟು ಅರಿಶಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮೊದಲು ಕಣ್ಣನ್ನು ಚೆನ್ನಾಗಿ ಒಂದು ಹತ್ತಿಯ ಬಟ್ಟೆಯ ಸಹಾಯದಿಂದ ಕ್ಲೀನ್ ಮಾಡಿಕೊಂಡು ಅದಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ತೊಳೆದುಕೊಳ್ಳಿ. ನಂತರ ಈ ಭಾಗವನ್ನು ಒರೆಸಿಕೊಂಡು, ಸ್ವಲ್ಪ ಆಲಿವ್ ಎಣ್ಣೆ ತೆಗೆದುಕೊಂಡು ಮಸಾಜ್ ಮಾಡಿಕೊಳ್ಳಿ. ಇದನ್ನು ವಾರದಲ್ಲಿ ಮೂರು ಬಾರಿ ಮಾಡುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲ ಕಡಿಮೆಯಾಗುತ್ತದೆ.
ಇನ್ನು 8 ಗಂಟೆ ಹೊತ್ತು ಚೆನ್ನಾಗಿ ನಿದ್ರಿಸುವುದರಿಂದ ಕೂಡ ಈ ಕಪ್ಪು ವರ್ತುಲ ಕಡಿಮೆಯಾಗುತ್ತದೆ. ಹಾಗೇ ವಿಟಮಿನ್ ಸಿ ಇರುವ ಹಣ್ಣು ತರಕಾರಿಗಳನ್ನು ಚೆನ್ನಾಗಿ ತಿನ್ನಿರಿ. ದಿನಕ್ಕೆ 3 ಲೀಟರ್ ನೀರನ್ನು ಕುಡಿಯುವುದರಿಂದ ಕೂಡ ಈ ಸಮಸ್ಯೆ ನಿವಾರಣೆಯಾಗುತ್ತದೆ.