ಬೇಸಿಗೆ ಕಾಲವಾಗಿರೋದ್ರಿಂದ ಪದೇ ಪದೇ ಸ್ನಾನ ಮಾಡೋಣ ಎನಿಸುವುದು ಸಹಜ. ಸೆಖೆ, ಬೆವರಿನ ಕಿರಿ ಕಿರಿ ತಡೆಯಲಾಗದೇ ಜನರು ದಿನಕ್ಕೆ ಎರಡು ಬಾರಿಯಾದ್ರೂ ಸ್ನಾನ ಮಾಡ್ತಾರೆ. ಕೆಲವರು ರಾತ್ರಿ ಊಟ ಮಾಡಿದ ನಂತರ ಸ್ನಾನ ಮಾಡ್ತಾರೆ. ಆದ್ರೆ ಈ ರೀತಿ ಮಾಡುವುದರಿಂದ ನೀವು ಅನೇಕ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ.
ಆಹಾರ ಸೇವಿಸಿದ ನಂತರ ಸ್ನಾನ ಮಾಡುವ ಅಭ್ಯಾಸ ಒಳ್ಳೆಯದಲ್ಲ. ಈ ಕಾರಣದಿಂದ ನಿಮ್ಮ ತೂಕ ಹೆಚ್ಚಾಗಬಹುದು. ಆಸಿಡಿಟಿ ಮತ್ತು ಮಲಬದ್ಧತೆಯ ಸಮಸ್ಯೆ ಬರಬಹುದು. ಬೆಳಗ್ಗಿನ ಉಪಹಾರವಾದ ತಕ್ಷಣ ಅಥವಾ ರಾತ್ರಿ ಊಟ ಮಾಡಿದ ಕೂಡಲೇ ಸ್ನಾನ ಮಾಡಬಾರದು, ಇದರಿಂದ ಮಲಬದ್ಧತೆ ಉಂಟಾಗುತ್ತದೆ. ಸ್ನಾನದ ನಂತರ ದೇಹದ ಉಷ್ಣತೆಯು ಹೆಚ್ಚಾಗುತ್ತದೆ, ಇದರಿಂದಾಗಿ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ.
ಹೆಚ್ಚಿನವರು ಊಟ ಮಾಡಿದ ನಂತರ ಹಣ್ಣುಗಳನ್ನು ತಿನ್ನುತ್ತಾರೆ. ಈ ರೀತಿ ಮಾಡುವುದರಿಂದ ನಿಮಗೆ ನೀವೇ ಅಪಾಯ ತಂದುಕೊಂಡಂತೆ. ಊಟವಾದ ಮೇಲೆ ಹಣ್ಣುಗಳನ್ನು ತಿನ್ನುವುದರಿಂದ ಆಸಿಟಿಡಿ ಉಂಟಾಗುತ್ತದೆ.
ಕೆಲವರಿಗೆ ಊಟ ಅಥವಾ ತಿಂಡಿ ಆದಮೇಲೆ ಧೂಮಪಾನ ಮಾಡಿ ಅಭ್ಯಾಸ. ಆದರೆ ಹೀಗೆ ಮಾಡುವವರು ಜಾಗರೂಕರಾಗಿರಿ. ಆಹಾರ ಸೇವನೆ ಬಳಿಕ ಧೂಮಪಾನ ಮಾಡಿದರೆ ತೂಕ ಹೆಚ್ಚಾಗುತ್ತದೆ.
ಊಟವಾದ ತಕ್ಷಣ ಮಲಗಿದ್ರೆ ಎಂಥವರಿಗೂ ಒಳ್ಳೆ ನಿದ್ದೆ ಬರುತ್ತದೆ. ಆದ್ರೆ ಈ ರೀತಿ ಮಲಗುವುದರಿಂದ ನೀವು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಊಟ ಮಾಡಿದ ತಕ್ಷಣ 10-15 ನಿಮಿಷಗಳ ಕಾಲ ನಡೆಯಬೇಕು. ನಂತರ ಬೇಕಾದಲ್ಲಿ ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ತೆಗೆದುಕೊಳ್ಳಬಹುದು.