ಇದು ಮಾವಿನ ಋತು. ಹಣ್ಣಿನ ರಾಜ ಮಾವು ಯಾರಿಗೆ ಇಷ್ಟವಿಲ್ಲ. ಸಿಹಿಸಿಹಿ ಮಾವು ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಮಾವಿನ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಕೆಲವೊಂದು ರೋಗದಿಂದ, ಸಮಸ್ಯೆಯಿಂದ ಬಳಲುತ್ತಿರುವವರು ಮಾವಿನ ಹಣ್ಣಿನಿಂದ ದೂರವಿದ್ರೆ ಒಳ್ಳೆಯದು.
ಮಧುಮೇಹ : ಯಾರಿಗೆ ಮಧುಮೇಹ ರೋಗವಿರುತ್ತದೆಯೋ ಅವರು ಮಾವಿನ ಹಣ್ಣನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ. ಮಾವಿನ ಹಣ್ಣು ಜಾಸ್ತಿ ಸಿಹಿಯಾಗಿರುವುದರಿಂದ ಮಾವಿನ ಹಣ್ಣು ಸೇವನೆ ಮಾಡುವುದರಿಂದ ದೇಹದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ.
ಹೊಟ್ಟೆ ಸಮಸ್ಯೆ : ಮಾವಿನ ಹಣ್ಣನ್ನು ಜಾಸ್ತಿ ಸೇವನೆ ಮಾಡುವುದರಿಂದ ಫೈಬರ್ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಬೇಧಿ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗೆ ಹೊಟ್ಟೆಯಲ್ಲಿ ಬೇರೆ ಸಮಸ್ಯೆ ಇರುವವರು ಮಾವಿನ ಹಣ್ಣಿನಿಂದ ದೂರವಿರುವುದು ಬೆಸ್ಟ್.
ಸ್ಥೂಲಕಾಯ : ತೂಕ ಜಾಸ್ತಿಯಿರುವವರು ಹಾಗೂ ತೂಕ ಇಳಿಸಿಕೊಳ್ಳಲು ಬಯಸುವವರು ಮಾವಿನ ಹಣ್ಣು ಸೇವನೆ ಮಾಡಬೇಡಿ. ಇದ್ರಲ್ಲಿ ಕ್ಯಾಲೋರಿ ಹಾಗೂ ಸಕ್ಕರೆ ಪ್ರಮಾಣ ಹೆಚ್ಚಿರುವುದರಿಂದ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ.
ಅಲರ್ಜಿ : ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಮಾವಿನ ಹಣ್ಣು ಸೇವನೆ ಮಾಡಬಾರದು.
ಹೃದಯ ಸಮಸ್ಯೆ : ಮಾವಿನಲ್ಲಿ ಪೊಟ್ಯಾಸಿಯಮ್ ಪ್ರಮಾಣ ಹೆಚ್ಚಿರುತ್ತದೆ. ಇದ್ರ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಜಾಸ್ತಿಯಾಗಿ ಹೃದಯ ರೋಗಿಗಳ ಸಮಸ್ಯೆ ಹೆಚ್ಚಾಗುತ್ತದೆ.
ಅಸ್ತಮಾ : ಅಸ್ತಮಾ ರೋಗಿಗಳು ಕೂಡ ಮಾವಿನ ಹಣ್ಣು ಸೇವನೆ ಮಾಡಬೇಡಿ.