ಅತಿಯಾದ ಉಪ್ಪು ಸೇವನೆ ಆರೋಗ್ಯಕ್ಕೆ ಅಪಾಯಕಾರಿ ಅನ್ನೋದು ನಮಗೆಲ್ಲಾ ಗೊತ್ತಿದೆ. ಒಂದು ತಿಂಗಳು ಉಪ್ಪನ್ನು ಬಿಟ್ಟರೆ ದೇಹದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ ? ಧಾರ್ಮಿಕ ಉಪವಾಸವಾಗಲಿ ಅಥವಾ ಡಯಟ್‌ನ ಭಾಗವಾಗಲಿ, ಕಾಲಕಾಲಕ್ಕೆ ಕೆಲವು ಆಹಾರಗಳನ್ನು ತ್ಯಜಿಸುವುದು ಸಾಮಾನ್ಯ. ಇದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, ಆರೋಗ್ಯವಂತ ವಯಸ್ಕ ದಿನಕ್ಕೆ 4 ಗ್ರಾಂಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು. ಆದಾಗ್ಯೂ ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
30 ದಿನಗಳವರೆಗೆ ಉಪ್ಪು ಸೇವಿಸದೇ ಇದ್ದರೆ ಏನಾಗುತ್ತದೆ ?
ತೂಕ ಇಳಿಕೆ – ಜಂಕ್ ಫುಡ್ ತ್ಯಜಿಸುವ ಮೊದಲ ಪರಿಣಾಮವೆಂದರೆ ತೂಕ ಇಳಿಕೆ. 30 ದಿನಗಳವರೆಗೆ ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಿದಾಗ ನಾವು ಅತಿಯಾದ ಸೇವನೆಯಿಂದ ದೂರವಿರುತ್ತೇವೆ. ಪರಿಣಾಮ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆಯಾಗುತ್ತದೆ. ಆದರೆ ತೂಕವು ಅಸಹಜವಾಗಿ ಕಡಿಮೆಯಾದರೆ ಆರೋಗ್ಯ ಹದಗೆಡಬಹುದು ಎಂಬುದು ಗಮನದಲ್ಲಿರಲಿ.
ಜೀರ್ಣಕ್ರಿಯೆ ಸಮಸ್ಯೆ – ಒಂದು ತಿಂಗಳ ಕಾಲ ಉಪ್ಪು ಸೇವಿಸದೇ ಇದ್ದರೆ ದೇಹದ ವಿವಿಧ ವ್ಯವಸ್ಥೆಗಳ ಮೇಲೆ ಪರಿಣಾಮ ಉಂಟಾಗಬಹುದು. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ, ಕರುಳಿನ ಮೇಲೆ ಕೂಡ ಪರಿಣಾಮ ಬೀರಬಹುದು. ಹೊಟ್ಟೆ ನೋವು ಮತ್ತು ಇತರ ಕಾಯಿಲೆ ಬರುವ ಸಾಧ್ಯತೆಯೂ ಇರುತ್ತದೆ.
ಮಾನಸಿಕ ಆರೋಗ್ಯ ಸಮಸ್ಯೆ – ಉಪ್ಪು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಅದು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಒತ್ತಡ, ಆತಂಕ ಮತ್ತು ನಿರಾಸಕ್ತಿ ಆವರಿಸುವ ಸಾಧ್ಯತೆ ಇರುತ್ತದೆ. ಇದರರ್ಥ ಸೀಮಿತ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದು ಅವಶ್ಯಕ.
ಒಂದು ತಿಂಗಳ ಕಾಲ ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸುವುದು ಹಾನಿಕಾರಕ. ಆದ್ದರಿಂದ ಹಾಗೆ ಮಾಡುವ ಮೊದಲು ಬಹಳಷ್ಟು ಯೋಚಿಸಬೇಕು ಮತ್ತು ಅದರ ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕು. ಇದಲ್ಲದೆ ಈ ಡಯಟ್‌ಗೂ ಮುನ್ನ ವೈದ್ಯರು ಮತ್ತು ಆಹಾರ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಉಪ್ಪಿನಲ್ಲಿರುವ ಸೋಡಿಯಂ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ, ಅದರ ಕೊರತೆ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.