ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗೋದು ಸಾಮಾನ್ಯ ಸಂಗತಿ. ಚಪ್ಪಲಿ ಕಳ್ಳತನವಾದ್ರೆ ನಿಶ್ಚಿತವಾಗಿ ನಮಗೆ ನಷ್ಟವೆ. ಆದ್ರೆ ಜ್ಯೋತಿಷ್ಯ ಶಾಸ್ತ್ರ ಬೇರೆಯದನ್ನೇ ಹೇಳುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗುವುದು ಶುಭ ಸಂಕೇತ. ಅದ್ರಲ್ಲೂ ಶನಿವಾರ ಚಪ್ಪಲಿ ಕಳುವಾದ್ರೆ ಬಹಳ ಒಳ್ಳೆಯದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ಚಪ್ಪಲಿ ಕಳ್ಳತನವಾದ್ರೆ ಶೀಘ್ರದಲ್ಲಿಯೇ ಕೆಟ್ಟ ಸಮಯ ಕಳೆಯಲಿದೆ ಎಂದರ್ಥ. ಶನಿ ದೋಷ ಕಳೆದು ಒಳ್ಳೆಯದಾಗಲಿದೆ ಎನ್ನುವುದರ ಸಂಕೇತವಿದು. ಯಾವುದೇ ಕೆಲಸ ಕೈಗೂಡದೆ ತೊಂದರೆಯಲ್ಲಿದ್ದ ವೇಳೆ ಚಪ್ಪಲಿ ಕಳುವಾದ್ರೆ ದುಃಖಪಡುವ ಬದಲು ಖುಷಿಯಾಗಿರಿ. ಇದು ಶನಿ ದೋಷ ನಿವಾರಣೆಯಾಗುತ್ತಿದೆ ಎಂಬುದರ ಮುನ್ಸೂಚನೆ ಎಂಬುದನ್ನು ಮರೆಯಬೇಡಿ.
ದೇಹದ ಪ್ರತಿಯೊಂದು ಅಂಗಕ್ಕೂ ಗ್ರಹಕ್ಕೂ ಸಂಬಂಧವಿದೆ. ಪಾದಗಳನ್ನು ಶನಿಗೆ ಹೋಲಿಸಲಾಗುತ್ತದೆ. ಹಾಗೆ ಚಪ್ಪಲಿ ಹಾಗೂ ಬೂಟು ಕಳ್ಳತನವಾಗಲೂ ಶನಿಯೇ ಕಾರಣ. ಹಾಗಾಗಿಯೇ ಶನಿವಾರ ಚಪ್ಪಲಿ ದಾನ ಮಾಡಿದ್ರೆ ಶನಿ ಪ್ರಸನ್ನನಾಗ್ತಾನೆ. ಶೀಘ್ರದಲ್ಲಿಯೇ ಅದೃಷ್ಟದ ದಾರಿ ತೋರಿಸುತ್ತಾನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರ ಜಾತಕದಲ್ಲಿ ಗ್ರಹ ದೋಷವಿರುತ್ತದೆಯೋ ಅವರಿಗೆ ಸುಲಭವಾಗಿ ಜಯ ದಕ್ಕುವುದಿಲ್ಲ. ಗ್ರಹ ದೋಷವಿದ್ದವರು ಪ್ರತಿದಿನ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು. ಶಿವಲಿಂಗಕ್ಕೆ ಜಲವನ್ನು ಅರ್ಪಿಸಬೇಕು. ಪ್ರತಿದಿನ ದೇವಸ್ಥಾನಕ್ಕೆ ಹೋಗಬೇಕು. ಪ್ರತಿದಿನ ಹನುಮಾನ್ ಚಾಲೀಸ್ ಓದಬೇಕು.