ಅನೇಕ ಬಾರಿ ಕನಸುಗಳು ನಮ್ಮನ್ನು ಭಯಪಡಿಸುತ್ತವೆ. ಸುಖನಿದ್ರೆಗೂ ಭಂಗ ತರುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ಕನಸುಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ. ಕನಸಿನಲ್ಲಿ ಕಾಣುವ ವಿಷಯಗಳಿಗೆ ಹಲವು ಅರ್ಥಗಳಿವೆ. ಅನೇಕ ಕನಸುಗಳನ್ನು ಮಂಗಳಕರವೆಂದು ಪರಿಗಣಿಸಿದರೆ, ಇನ್ನು ಕೆಲವು ಅಶುಭ ಘಟನೆಗಳ ಸೂಚನೆಗಳಾಗಿರುತ್ತವೆ.
ಕನಸಿನಲ್ಲಿ ಸಿಂಹ ಕಂಡರೆ ಅದರ ಸೂಚನೆಗಳೇನು?
ಕನಸಿನಲ್ಲಿ ಸಿಂಹವನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಸಿಂಹ ಕಂಡರೆ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದರ ಸಂಕೇತ ಅದು. ಕೋರ್ಟ್ ಕೇಸ್‌ಗಳಿದ್ದರೆ ಅವುಗಳಲ್ಲಿ ಪರಿಹಾರ ಸಿಗುತ್ತವೆ. ಅವಿವಾಹಿತರಿಗೆ ಮದುವೆಯ ಯೋಗ ಕೂಡಿ ಬರಬಹುದು.
ಕನಸಿನಲ್ಲಿ ಸಿಂಹದ ಬಗ್ಗೆ ಭಯಪಟ್ಟುಕೊಂಡರೆ ನೀವು ನಿಜಜೀವನದಲ್ಲಿರುವ ಸಮಸ್ಯೆಗಳ ಬಗ್ಗೆ ಹೆದರುತ್ತಿದ್ದೀರಿ ಎಂದರ್ಥ. ಈ ಸಮಸ್ಯೆಗಳ ಬಗ್ಗೆ ಭಯಪಡುವ ಬದಲು ನಿರ್ಭಯವಾಗಿ ಎದುರಿಸಬೇಕು.
ಕನಸಿನಲ್ಲಿ ಸಿಂಹದ ಘರ್ಜನೆ ಕೇಳಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಿಂಹ ಘರ್ಜನೆ ನಮ್ಮ ಬದುಕಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬುದರ ಸಂಕೇತವಾಗಿರುತ್ತದೆ.
ಕನಸಿನಲ್ಲಿ ಸಿಂಹ ನಿದ್ರಿಸುತ್ತಿರುವುದನ್ನು ನೋಡಿದರೆ ಅದು ಸಹ ಒಳ್ಳೆಯ ಸಂಕೇತವಾಗಿದೆ. ವೃತ್ತಿಜೀವನದಲ್ಲಿ ಹೊಸ ಸ್ಥಾನವನ್ನು ಸಾಧಿಸಬಹುದು ಎಂಬುದು ಇದರ ಅರ್ಥ.
ಕನಸಿನಲ್ಲಿ ಸಿಂಹವು ನಮ್ಮ ಮೇಲೆ ಆಕ್ರಮಣ ಮಾಡಿದಂತೆನಿಸಿದರೆ ಕೊಂಚ ಜಾಗರೂಕರಾಗಿರಬೇಕು. ಕನಸಿನ ವಿಜ್ಞಾನದ ಪ್ರಕಾರ ಮಾನಸಿಕ ಒತ್ತಡವು ನಿಮ್ಮ ವೈಫಲ್ಯಕ್ಕೆ ಕಾರಣವಾಗಬಹುದು, ಜೀವನದಲ್ಲಿ ಬದಲಾವಣೆಗಳನ್ನು ತರಬೇಕಾಗಿದೆ ಎಂಬುದರ ಸೂಚನೆ ಇದು.