alex Certify ಕಾರ್ತಿಕ ಮಾಸದ ಹುಣ್ಣಿಮೆ ದಿನ ಈ ಪೂಜೆ ಮಾಡಿದರೆ ಶಿವನ ಜೊತೆಗೆ ದೊರೆಯುತ್ತೆ ಲಕ್ಷ್ಮಿ ಅನುಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ತಿಕ ಮಾಸದ ಹುಣ್ಣಿಮೆ ದಿನ ಈ ಪೂಜೆ ಮಾಡಿದರೆ ಶಿವನ ಜೊತೆಗೆ ದೊರೆಯುತ್ತೆ ಲಕ್ಷ್ಮಿ ಅನುಗ್ರಹ

ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆಯನ್ನು ಮಾಡುತ್ತಾರೆ. ಆದರೆ ಶಿವನ ಜೊತೆಗೆ ಲಕ್ಷ್ಮಿದೇವಿಯ ಅನುಗ್ರಹ ಪಡೆಯಲು ಕಾರ್ತಿಕ ಮಾಸದ ಈ ದಿನದಂದು ಲಕ್ಷ್ಮಿ ಪೂಜೆ ಮಾಡಬೇಕು. ಇದರಿಂದ ಸಕಲ ಯೋಗ ಪ್ರಾಪ್ತಿಯಾಗುತ್ತದೆ.

ಕಾರ್ತಿಕ ಮಾಸದ ಹುಣ್ಣಿಮೆ ದಿನದಂದು ಸರ್ವ ಜಯಂಕರೀ ದೀಪಲಕ್ಷ್ಮಿ ಪೂಜೆ ಮಾಡಿ. ಆ ವೇಳೆ ಶಿವನ ಫೋಟೊ ಇಟ್ಟು ಶಿವನಿಗೆ ಪ್ರಿಯವಾದ ಹೂ, ಪತ್ರೆಯನ್ನು ಅರ್ಪಿಸಿ, ಲಕ್ಷ್ಮಿಯ ಸ್ವರೂಪವಾದ ದೀಪವನ್ನು ಹಚ್ಚಬೇಕು. ಈ ದೀಪಕ್ಕೆ ಕಮಲದ ನಾರಿನಿಂದ ತೆಗೆದ ಬತ್ತಿಯಿಂದ ತುಪ್ಪ ಹಾಕಿ ದೀಪಾರಾಧನೆ ಮಾಡಬೇಕು.

ಹಾಗೇ ಪೂಜೆಯ ವೇಳೆ “ಓಂ ನಮಃ ಶಿವಾಯ ಶುಭಂ ಶುಭಂ, ಕುರುಕುರು ಶನಮ ಶಿವಾಯ ಓಂ ನಮಃ” ಈ ಮಂತ್ರವನ್ನು 11 ಬಾರಿ ಹೇಳಬೇಕು. ಬಳಿಕ ಪಚ್ಚೆ ಕರ್ಪೂರದ ಆರತಿ ಬೆಳಗಿ, ಕಲ್ಲುಸಕ್ಕರೆ, ಬಾಳೆಹಣ್ಣನ್ನು ನೈವೇದ್ಯವಾಗಿ ಇಡಬೇಕು. ಹೀಗೆ ಮಾಡಿದರೆ ಶಿವ ಮತ್ತು ಲಕ್ಷ್ಮಿ ಇಬ್ಬರ ಅನುಗ್ರಹದಿಂದ ನಿಮಗೆ ಪುಣ್ಯ, ಅಷ್ಟ ಐಶ್ವರ್ಯ ದೊರೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...