ಸುಗಂಧದ ಮೂಲ ಹೂ. ಹೂವನ್ನು ಶುಕ್ರನ ಸಂಕೇತವೆಂದು ಪರಿಗಣಿಸಲಾಗಿದೆ. ಹೂವು ಯಾವಾಗ್ಲೂ ಆಕಾಶವನ್ನು ನೋಡುತ್ತಿರುತ್ತದೆ. ದೇವಾನುದೇವತೆಗಳಿಗೆ ಹೂವನ್ನು ಅರ್ಪಿಸಲಾಗುತ್ತದೆ. ಹೂವನ್ನು ತಾಯಿ ಲಕ್ಷ್ಮಿಗೆ ಅರ್ಪಿಸಿದ್ರೆ ಆಕೆ ಪ್ರಸನ್ನಳಾಗ್ತಾಳೆ.
ಸನಾತನ ಸಂಸ್ಕೃತಿಯಲ್ಲಿ ಹೂವಿನ ಪೂಜೆಗೆ ವಿಶೇಷ ಮಹತ್ವ ನೀಡಲಾಗಿದೆ. ಹೂವಿಲ್ಲದೆ ದೇವರ ಪೂಜೆ ಮಾಡುವುದು ಅಪೂರ್ಣವೆಂದು ಪರಿಗಣಿಸಲಾಗಿದೆ. ಹೂಗಳಿಂದ ಸುಗಂಧ ತಯಾರಿ ಮಾಡಲಾಗುತ್ತದೆ. ಸುಗಂಧ ಲಕ್ಷ್ಮಿಗೆ ಪ್ರಿಯವಾದ ವಸ್ತು, ಶಾಸ್ತ್ರದಲ್ಲಿ ಲಕ್ಷ್ಮಿಯನ್ನು ಕಮಲವಾಸಿ ಹಾಗೂ ಸುಗಂಧಿ ಎಂದು ಕರೆಯಲಾಗುತ್ತದೆ. ಅಂದ್ರೆ ಲಕ್ಷ್ಮಿ ಹೂವಿನಲ್ಲಿ ವಾಸವಾಗಿರುತ್ತಾಳೆಂದು ಅರ್ಥ.
ಶುಕ್ರವಾರ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಹೂವಿನಿಂದ ಮಾಡಿದ ಸುಗಂಧವನ್ನು ಅರ್ಪಿಸಬೇಕು. ಒಂದೊಂದು ಬೇಡಿಕೆಗೆ ಒಂದೊಂದು ಸುಗಂಧವನ್ನು ಅರ್ಪಿಸಬೇಕಾಗುತ್ತದೆ.
ದಾಂಪತ್ಯ ಸುಖ ಬಯಸುವವರು ಗುಲಾಬಿ ಸುಗಂಧವನ್ನು ದೇವಿಗೆ ಅರ್ಪಿಸಬೇಕು. ಕೇತಕ್ಕಿ ಸುಗಂಧವನ್ನು ತಾಯಿಗೆ ಅರ್ಪಿಸುವುದ್ರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಶ್ರೀಗಂಧದ ಅಸ್ತ್ರ ಅದೃಷ್ಟವನ್ನು ಹೆಚ್ಚಿಸುತ್ತದೆ.