alex Certify ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಂಡರೆ ಮಾಡಬಹುದು ʼನೆಮ್ಮದಿʼ ನಿದ್ದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಂಡರೆ ಮಾಡಬಹುದು ʼನೆಮ್ಮದಿʼ ನಿದ್ದೆ

ನೆಮ್ಮದಿ ಮತ್ತು ದೀರ್ಘಾಯುಷ್ಯಕ್ಕೆ ಆರೋಗ್ಯಕರ ಜೀವನ ಶೈಲಿ ಅತ್ಯಂತ ಅವಶ್ಯಕ. ಅನಾರೋಗ್ಯ ಮತ್ತು ಖಾಯಿಲೆಗೆ ಕಾರಣವಾಗಬಲ್ಲ ಕೆಲವೊಂದು ಸಣ್ಣ ಪುಟ್ಟ ಸಂಗತಿಗಳನ್ನು ನಾವು ದಿನನಿತ್ಯದ ಬದುಕಿನಲ್ಲಿ ಅಲಕ್ಷಿಸುತ್ತೇವೆ.

ಹಾಗಾಗಿ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡ್ರೆ ಆರೋಗ್ಯವಾಗಿರಬಹುದು. ಹಿಂದು ಪುರಾಣದ ಪ್ರಕಾರ ನೆಮ್ಮದಿಯ ನಿದ್ದೆಗಾಗಿ ಮಲಗುವ ಮುನ್ನ ಕೆಲವೊಂದು ಅಭ್ಯಾಸಗಳನ್ನು ಮಾಡಲೇಬೇಕು. ಅವು ಯಾವುವು ಅನ್ನೋದನ್ನು ನೋಡೋಣ.

ವಜ್ರಾಸನದಲ್ಲಿ ಕುಳಿತುಕೊಳ್ಳಿ : ಊಟ ಆದ ತಕ್ಷಣ ಮಲಗಬೇಡಿ. ಸ್ವಲ್ಪ ಹೊತ್ತು ವಾಕಿಂಗ್ ಮಾಡಿ ಅಥವಾ ವಜ್ರಾಸನದಲ್ಲಿ ಕುಳಿತುಕೊಳ್ಳಿ.

ಮೆದುಳಿಗೆ ವಿಶ್ರಾಂತಿ ಕೊಡಿ : ರಾತ್ರಿ ಊಟ ಮಾಡಿ ಎರಡು ಗಂಟೆಯ ನಂತರ ಮಲಗುವುದು ಒಳ್ಳೆಯದು. ನಿಮ್ಮ ನೆಚ್ಚಿನ ಪುಸ್ತಕ ಓದುತ್ತ, ಅಥವಾ ಇನ್ಯಾವುದಾದರೂ ಮೋಜಿನ ಕೆಲಸ ಮಾಡುವ ಮೂಲಕ ಮೆದುಳಿಗೆ ನೀವು ವಿಶ್ರಾಂತಿ ಕೊಡಬೇಕು. ಆದ್ರೆ ಯಾವುದೂ ಅತಿಯಾಗದಂತೆ ಎಚ್ಚರ ವಹಿಸಿ.

ಪ್ರಾರ್ಥನೆ : ಮಲಗುವ ಮುನ್ನ ಪ್ರಾರ್ಥಿಸುವುದರಿಂದ ನಿಮಗೆ ಕೆಟ್ಟ ಕನಸುಗಳು ಬೀಳುವುದಿಲ್ಲ. ದೇವರನಾಮ, ಸ್ತ್ರೋತ್ರಗಳನ್ನು ನೀವು ಪಠಿಸಬಹುದು. ಇಲ್ಲವಾದಲ್ಲಿ ಒಳ್ಳೆಯ ಸಂಗೀತವನ್ನು ಆಲಿಸಿದ ಬಳಿಕ ನಿದ್ದೆ ಮಾಡಿ.

ಮಲಗುವ ಸಮಯ : ಬೇಗ ಮಲಗಿ ಬೇಗ ಏಳು ಅನ್ನೋ ಮಾತೇ ಇದೆ. ರಾತ್ರಿ ಬೇಗನೆ ಮಲಗಿ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಏಳುವುದು ಆರೋಗ್ಯಕ್ಕೆ ಉತ್ತಮ. ಸೂರ್ಯೋದಯದ ನಂತರ ಎದ್ದರೆ ನಿಮಗೆ ಆಯಾಸವೆನಿಸುತ್ತದೆ, ದಿನವಿಡೀ ಆಲಸ್ಯ ಕಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...