
ಇನ್ಸ್ಟಾಗ್ರಾಂ ಸೆನ್ಸೇಷನ್ ಕಿಲಿ ಪಾಲ್ ಬಗ್ಗೆ ಬಹುಶಃ ನಿಮಗೆ ತಿಳಿದಿರಬಹುದು. ಪ್ರಸಿದ್ಧ ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್, ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಇವರು ಆಗಾಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೀಗಾಗಿ ಇವರು ಅನೇಕ ಭಾರತೀಯ ಅಭಿಮಾನಿಗಳನ್ನು ಹೊಂದಿದ್ದಾರೆ.
ತಾಂಜೇನಿಯಾದ ಈ ಇಂಟರ್ನೆಟ್ ಸೆನ್ಸೇಷನ್ ಇದೀಗ ಮತ್ತೊಂದು ಕಿಲ್ಲರ್ ವಿಡಿಯೋದೊಂದಿಗೆ ಮರಳಿದ್ದಾರೆ. ಇದೀಗ ಅವರು ರಾಜ್ ಕಪೂರ್ ಅವರ ಜನಪ್ರಿಯ ಹಾಡಾದ ʼಕಿಸಿ ಕಿ ಮುಸ್ಕುರಾಹಟನ್ ಪೆ ಹೋʼ ಗೆ ಲಿಪ್ ಸಿಂಕ್ ಮಾಡಿದ್ದಾರೆ.
ಈ ವಿಡಿಯೋವನ್ನು ಕಿಲಿ ಪಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಿರು ವಿಡಿಯೋದಲ್ಲಿ, ಅವರು 1959ರ ʼಅನಾರಿʼ ಚಲನಚಿತ್ರದ ಜನಪ್ರಿಯ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಅವರ ಸಹೋದರಿ ನೀಮಾ ಪೌಲ್ ಕೂಡ ಅವರೊಂದಿಗೆ ಸೇರಿಕೊಂಡಿದ್ದಾರೆ. ಇಬ್ಬರೂ ಸೇರಿ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ.
ನೀವು ಹಳೆಯ ಮಧುರ ಗೀತೆಗಳ ಅಭಿಮಾನಿಗಳಾಗಿದ್ದರೆ ಖಂಡಿತಾ ಇದನ್ನು ನೀವು ಇಷ್ಟಪಡುತ್ತೀರಿ. ವಿಡಿಯೋವನ್ನು ಹಂಚಿಕೊಳ್ಳುತ್ತಾ ಕಿಲಿ ಪಾಲ್ ಓಲ್ಡ್ ಈಸ್ ಗೋಲ್ಡ್ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋ ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆಗಿದ್ದು, ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಕಿಲಿ ಅವರ ಪ್ರದರ್ಶನಕ್ಕೆ ಮನಸೋತಿದ್ದಾರೆ. ಕಾಮೆಂಟ್ ವಿಭಾಗವು ಹೃದಯ ಮತ್ತು ಪ್ರೀತಿ ಎಮೋಜಿಗಳಿಂದ ತುಂಬಿದೆ.