ಮತದಾರರ ಗುರುತಿನ ಚೀಟಿ, ಮತದಾನದ ಮಾಡಲು ಮಾತ್ರವಲ್ಲ ಸರ್ಕಾರಿ ಸೇವೆಗಳನ್ನು ಪಡೆಯುವ ವೇಳೆ ದಾಖಲೆ ರೂಪದಲ್ಲಿ ಅವಶ್ಯಕ. ಕೆಲವೊಮ್ಮೆ ಮತದಾರರ ಗುರುತಿನ ಚೀಟಿ ಕಳೆದು ಹೋಗುತ್ತದೆ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಸುಲಭವಾಗಿ ಕಾರ್ಡ್ ಡೌನ್ಲೋಡ್ ಮಾಡಬಹುದು.
ಡಿಜಿಟಲ್ ವೋಟರ್ ಐಡಿಗಾಗಿ, ಮತದಾರರ ಪೋರ್ಟಲ್ voterportal.eci.gov.in ಗೆ ಹೆಸರು ನೋದಾಯಿಸಬೇಕು.
ಇದರ ನಂತರ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ಗೆ (https://www.nvsp.in/account/login) ಗೆ ಲಾಗಿನ್ ಆಗಬೇಕು.
ಇಲ್ಲಿ ಲಾಗಿನ್ ಮಾಡಿದ ನಂತರ ಇಪಿಐಸಿ ಸಂಖ್ಯೆ ಅಥವಾ ಫಾರ್ಮ್ ರೆಫರೆನ್ಸ್ ಸಂಖ್ಯೆಯನ್ನು ನಮೂದಿಸಬೇಕು.
ಆಗ ನೋಂದಾಯಿತ ಸಂಖ್ಯೆಗೆ ಒಟಿಪಿ ಬರುತ್ತದೆ.
ವೆಬ್ ಪೋರ್ಟಲ್‌ನಲ್ಲಿ ಒಟಿಪಿಯನ್ನು ನಮೂದಿಸಬೇಕು.
ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಇ-ಇಪಿಐಸಿ ಮೇಲೆ ಕ್ಲಿಕ್ ಮಾಡಬೇಕು.
ನಂತ್ರ ಡಿಜಿಟಲ್ ಮತದಾರರ ಐಡಿಯನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಬಹುದು.
ಇದಲ್ಲದೆ ಕಲರ್ಫುಲ್ ಮತ್ತು ಪ್ಲಾಸ್ಟಿಕ್ ಮತದಾರರ ಗುರುತಿನ ಚೀಟಿಗಳನ್ನು ಸಹ ಪಡೆಯಬಹುದು. ಮೊದಲು ನೀವು ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು. ಇದು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಗುಣಮಟ್ಟ ಉತ್ತಮವಾಗಿರುತ್ತದೆ. ಈ ಕಾರ್ಡ್ ತಯಾರಿಸಲು 30 ರೂಪಾಯಿಗಳನ್ನು ಖರ್ಚು ಮಾಡಬೇಕು. ವೋಟರ್ ಐಡಿಗೆ ಸಂಬಂಧಿಸಿದ ಯಾವುದೇ ರೀತಿಯ ಸಹಾಯಕ್ಕಾಗಿ ಟೋಲ್ ಫ್ರೀ ಸಂಖ್ಯೆ 1950ಗೆ ಕರೆ ಮಾಡಬೇಕು.