ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ ಚಟುವಟಿಕೆ ಶೂನ್ಯವಾಗಿದ್ದು, ಜಂಕ್ ಫುಡ್ ಗೆ ಮೊದಲ ಆದ್ಯತೆ ಸಿಕ್ಕಿರುವುದು ಇದಕ್ಕೆ ಮೂಲ ಕಾರಣವಾಗಿದೆ. ಹೃದ್ರೋಗ ಸಮಸ್ಯೆ ಹತ್ತಿರ ಬರದಂತೆ ಎಚ್ಚರ ವಹಿಸುವುದು ಎಲ್ಲರ ಜವಾಬ್ದಾರಿ.
ಪ್ರತಿ ದಿನ ಮಾಡುವ ವ್ಯಾಯಾಮ ಹೃದಯವನ್ನು ಆರೋಗ್ಯವಾಗಿಡುತ್ತದೆ. ಪ್ರತಿ ದಿನ ಕನಿಷ್ಠ 15 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ವ್ಯಾಯಾಮ ಮಾಡಲೇಬೇಕೆಂದೇನೂ ಇಲ್ಲ. ವಾಕ್ ಮಾಡಿದ್ರೂ ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ.
ಜಂಕ್ ಫುಡ್ ನಲ್ಲಿ ಎಣ್ಣೆ ಪ್ರಮಾಣ ಹೆಚ್ಚಿರುತ್ತದೆ. ಇದು ನಿಮ್ಮ ಹೃದಯಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಹೃದ್ರೋಗದಿಂದ ದೂರವಿರಲು ಬಯಸಿದವರು ಎಣ್ಣೆಯಿಂದ ದೂರವಿರಿ.
ಖಿನ್ನತೆ ಹಾಗೂ ಒತ್ತಡ ಹೃದ್ರೋಗಕ್ಕೆ ಮೂಲ ಕಾರಣ. ಖಿನ್ನತೆ ಕಡಿಮೆ ಮಾಡಿಕೊಳ್ಳಲು ಧ್ಯಾನ ಮಾಡಬಹುದು. ಇದ್ರಿಂದ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.
ಹೃದಯ ರೋಗದಿಂದ ದೂರವಿರಲು ಬಯಸಿದವರು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅಧಿಕ ರಕ್ತದೊತ್ತಡ ಹೃದಯ ರೋಗಕ್ಕೆ ದಾರಿಮಾಡಿಕೊಡುತ್ತದೆ.