ಕಲ್ಲುಸಕ್ಕರೆಯಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಅವುಗಳಲ್ಲಿ ಮುಖ್ಯವಾದುದು ಎಂದರೆ ಕಫ ಶೀತದ ಲಕ್ಷಣಗಳನ್ನು ಕಡಿಮೆ ಮಾಡುವುದು. ಉಗುರು ಬೆಚ್ಚಗಿನ ನೀರಿನಲ್ಲಿ ಕಲ್ಲುಸಕ್ಕರೆ ಹಾಕಿ ಕುಡಿಯುವುದರಿಂದ ಕಫದ ಸಮಸ್ಯೆಗಳು ದೂರವಾಗುತ್ತವೆ.
ಕಲ್ಲುಸಕ್ಕರೆಯನ್ನು ಮಕ್ಕಳು ಕುಡಿಯುವ ನೀರಿಗೆ ಬೆರೆಸಿ ಕೊಡುವುದರಿಂದ ಶೀತ ಕಫದ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ. ಇನ್ನು ಮಕ್ಕಳು ತಿನ್ನುವ ಹಣ್ಣಿಗೆ ಕಲ್ಲುಸಕ್ಕರೆ ಸೇರಿಸಿ ಕೊಟ್ಟರೆ ಹೊಟ್ಟೆ ಸಂಬಂಧಿ ಸಮಸ್ಯೆಗಳೂ ಕಾಡುವುದಿಲ್ಲ.
ಅಜೀರ್ಣದ ಸಮಸ್ಯೆಯಿಂದ ವಾಂತಿ ಅಥವಾ ವಾಕರಿಗೆಯ ಲಕ್ಷಣಗಳು ಕಂಡುಬಂದರೆ ಕಲ್ಲುಸಕ್ಕರೆ ಚೂರನ್ನು ಬಾಯಿಗೆ ಹಾಕಿಕೊಳ್ಳಿ. ನಿಧಾನಕ್ಕೆ ಅದರ ರಸ ಕುಡಿಯುತ್ತಿರಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆದು ನಿಮ್ಮ ಸಮಸ್ಯೆಗಳು ದೂರವಾಗುತ್ತವೆ.
ರಾತ್ರಿ ಮಲಗುವ ಮುನ್ನ ಕುಡಿಯುವ ಹಾಲಿಗೆ ಸಕ್ಕರೆ ಹಾಕುವ ಬದಲು ಕಲ್ಲುಸಕ್ಕರೆ ಸೇರಿಸಿ ಕರಗಿಸಿ ಕುಡಿಯಲು ಕೊಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಉಸಿರಿನ ದುರ್ವಾಸನೆಯನ್ನು ಇದು ದೂರಮಾಡುತ್ತದೆ. ರಕ್ತಹೀನತೆ ಸಮಸ್ಯೆ ಇರುವವರು ಆಹಾರದಲ್ಲಿ ಕಲ್ಲುಸಕ್ಕರೆ ಬಳಸಿ ನೋಡಿ. ಹದಿನೈದು ದಿನಗಳೊಳಗೆ ನಿಮ್ಮ ಸಮಸ್ಯೆ ಇಲ್ಲವಾಗುವುದು ನಿಶ್ಚಿತ.