ದೀಪಾವಳಿಯಲ್ಲಿ ಮನೆ ತುಂಬ ದೀಪ ಬೆಳಗುವ ಸಂಪ್ರದಾಯ ನಡೆದುಕೊಂಡು ಬಂದಿದೆ. ತುಪ್ಪ ಹಾಗೂ ಎಣ್ಣೆ ದೀಪವನ್ನು ಬೆಳಗಲಾಗುತ್ತದೆ. ಪಂಡಿತರ ಪ್ರಕಾರ, ದೀಪ ಬೆಳಗುವ ಮೊದಲು ಕೆಲವೊಂದು ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ವಿಶೇಷ ಲಾಭ ಸಿಗಲು ಸಾಧ್ಯ.
ದೀಪ ಬೆಳಗುವಾಗ `ಶುಭಮ್ ಕರೋತಿ ಕಲ್ಯಾಣಂ’ ಮಂತ್ರವನ್ನು ಹೇಳಬೇಕು.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಿಯಮಿತವಾಗಿ ದೀಪಗಳನ್ನು ಬೆಳಗಿಸುವ ಮನೆಗಳಲ್ಲಿ, ಸಕಾರಾತ್ಮಕ ಶಕ್ತಿಯು ಸಕ್ರಿಯವಾಗಿರುತ್ತದೆ.
ದೀಪದ ಹೊಗೆ ವಾತಾವರಣದಲ್ಲಿ ಇರುವ ಹಾನಿಕಾರಕ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುತ್ತದೆ.
ಕತ್ತಲೆ ಮತ್ತು ನಕಾರಾತ್ಮಕತೆಯನ್ನು ಅಳಿಸಿ ಹಾಕುವ ಮೂಲಕ ದೀಪವು ಬೆಳಕನ್ನು ಹರಡುತ್ತದೆ, ಅದಕ್ಕಾಗಿಯೇ ಮನೆಗೆ ಬೆಳಗ್ಗೆ ಮತ್ತು ಸಂಜೆ ದೀಪದ ಬೆಳಕನ್ನು ಹರಡಬೇಕು.
ದೀಪಾವಳಿ ದಿನ ಮನೆ ಮುಖ್ಯ ದ್ವಾರದಲ್ಲಿ ದೀಪವನ್ನು ಹಚ್ಚಬೇಕು. ದೀಪಾವಳಿ ದಿನ ತಾಯಿ ಲಕ್ಷ್ಮಿ ಮನೆ ಮನೆಗೆ ಬರ್ತಾಳಂತೆ. ಆಕೆ ಸ್ವಾಗತಕ್ಕಾಗಿ ಮುಖ್ಯ ಗೇಟ್ ಬಳಿ ದೀಪ ಹಚ್ಚಬೇಕು.
ತುಪ್ಪದ ದೀಪವನ್ನು ಎಡಗೈನಲ್ಲಿ ಹಾಗೂ ಎಣ್ಣೆ ದೀಪವನ್ನು ಬಲಗೈನಲ್ಲಿ ಬೆಳಗಬೇಕು.
ಪೂಜೆ ಮಧ್ಯೆ ದೀಪವನ್ನು ಎಂದಿಗೂ ಆರಿಸಬಾರದು. ಯಾವಾಗ್ಲೂ ದೇವಾನುದೇವತೆಗಳ ಮುಂದೆ ದೀಪವನ್ನು ಹಚ್ಚಬೇಕು.