ನಿಮ್ಮ ಆರೋಗ್ಯ ಹದಗೆಡಲು ಮನೆಯ ವಾಸ್ತು ದೋಷವೂ ಕಾರಣವಾಗಿರಬಹುದು. ವಾಸ್ತು ದೋಷದಿಂದ ಅಲ್ಲಿ ವಾಸಿಸುವ ಜನರ ಆರೋಗ್ಯ ಹಾಳಾಗುತ್ತದೆ. ವಾಸ್ತು ದೋಷದಿಂದ ಸಮಸ್ಯೆ ಶುರುವಾದ್ರೆ ಅದು ಚಿಕಿತ್ಸೆಯಿಂದ ಕಡಿಮೆಯಾಗುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ ಹೇಳಿದ ಪರಿಹಾರವನ್ನು ಮಾಡಬೇಕಾಗುತ್ತದೆ.
ಮನೆಗೆ ನೆಗೆಟಿವಿಟಿ ಮುಖ್ಯವಾಗಿ ಮನೆಯ ಮುಖ್ಯ ಬಾಗಿಲಿನಿಂದ ಬರುತ್ತದೆ. ಹಾಗಾಗಿ ಇದನ್ನು ಯಾವಾಗಲೂ ಸ್ವಚ್ಛವಾಗಿಡಿ. ಮೇನ್ ಗೇಟ್ ಮುರಿಯದೇ ಇರುವ ಹಾಗೆ ಅಥವಾ ಅದರಲ್ಲಿ ಯಾವುದೇ ರೀತಿಯ ಬಿರುಕು ಮೂಡದ ಹಾಗೆ ನೋಡಿಕೊಳ್ಳಿ. ವಾಸ್ತು ಶಾಸ್ತ್ರದ ಪ್ರಕಾರ, ಮುಖ್ಯದ್ವಾರ ಹಾಳಾದರೆ ಅದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಮನೆಯ ಮುಖ್ಯ ಬಾಗಿಲಿಗೆ ಪ್ರತಿನಿತ್ಯ ಸ್ವಸ್ತಿಕ ಬಿಡಿಸಿದರೆ ಉತ್ತಮ.
ಮನೆಯ ಮಧ್ಯದ ಭಾಗವನ್ನು ಖಾಲಿಯಾಗಿಡಬೇಕು. ಹಾಗೆ ಮಧ್ಯ ಭಾಗವನ್ನು ಸ್ವಚ್ಛವಾಗಿಡಿ. ಈ ಸ್ಥಳ ಕೊಳಕಾದರೆ ಅದರಿಂದಲೇ ರೋಗ ಬರುತ್ತದೆ. ಇದರಿಂದ ಧನಹಾನಿಯುಂಟಾಗುತ್ತದೆ.
ಮನೆಯ ಕೋಣೆ, ಬಾಗಿಲು, ಕಿಟಕಿ ಮುಂತಾದ ಕಡೆ ಜೇಡ ಕಟ್ಟುವುದರಿಂದ ಒತ್ತಡ ಹೆಚ್ಚುತ್ತದೆ. ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.
ಮನೆಯ ಬೀಮ್ ಕೆಳಗಡೆ ಮಲಗುವುದರಿಂದ ಆರೋಗ್ಯ ಮತ್ತು ವೈವಾಹಿಕ ಜೀವನಕ್ಕೆ ತೊಡಕಾಗುತ್ತದೆ. ಹಾಗಾಗಿ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದು ಉತ್ತಮ.
ಮನೆಯಲ್ಲಿ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಲು ಪ್ರತಿದಿನ ಬೆಳಿಗ್ಗೆ-ಸಂಜೆ ಕರ್ಪೂರ ಬೆಳಗಿಸಿ ಮನೆಯಿಡಿ ಅದರ ಹೊಗೆ ಹೋಗುವಂತೆ ನೋಡಿಕೊಳ್ಳಿ. ಮನೆಯಲ್ಲಿ ಬೆಳಕು, ಗಾಳಿ ಎಲ್ಲೆಡೆ ಬರುವಂತಿರಲಿ. ಮನೆಯಲ್ಲಿ ಮುಳ್ಳಿರುವ ಗಿಡಗಳನ್ನು ಬೆಳೆಸಬೇಡಿ.