ಒಂದೊಂದು ಸ್ವಪ್ನಕ್ಕೂ ಒಂದೊಂದು ಕಾರಣವಿರುತ್ತೆ. ಸ್ವಪ್ನ ಮುಂದಾಗುವ ಸೂಚನೆ ಎನ್ನಲಾಗುತ್ತದೆ. ಬೆಳಗಿನ ಜಾವ ಬೀಳುವ ಕನಸು ನಿಜವಾಗುತ್ತೆ ಎಂಬ ನಂಬಿಕೆಯೂ ಇದೆ. ಕೆಲವೊಂದು ಕನಸುಗಳು ಕೆಟ್ಟದರ ಮನ್ಸೂಚನೆಯಾಗಿದ್ದರೆ ಮತ್ತೆ ಕೆಲವು ಕನಸುಗಳು ಒಳ್ಳೆಯದರ ಸೂಚನೆ. ನಿಮಗೂ ಇಂತ ಕನಸುಗಳು ಬಿದ್ದಿದ್ದರೆ ನೀವು ಕೋಟ್ಯಾಧಿಪತಿಗಳಾಗೋದು ನಿಶ್ಚಿತ.
ಕನಸು ಯಾವ ಸಮಯದಲ್ಲಿ ಬಿದ್ದಿದೆ ಎಂಬುದೂ ಮಹತ್ವ ಪಡೆಯುತ್ತೆ. ಮೊದಲೇ ಹೇಳಿದಂತೆ ಜ್ಯೋತಿಷ್ಯದ ಪ್ರಕಾರ ಸೂರ್ಯೋದಯದ ವೇಳೆ ಬಿದ್ದ ಕನಸು ಅದೇ ದಿನ ನಿಜವಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಕಂಡ ಕನಸು 10 ದಿನಗಳೊಳಗೆ ನಿಜವಾಗುತ್ತದೆ. ಮಧ್ಯರಾತ್ರಿ ಅಂದ್ರೆ ಬ್ರಹ್ಮ ಮುಹೂರ್ತದ ಮೊದಲು ಬಿದ್ದ ಸ್ವಪ್ನದ ಪರಿಣಾಮ ಒಂದು ತಿಂಗಳೊಳಗೆ ತಿಳಿಯುತ್ತದೆಯಂತೆ.
ರಾತ್ರಿ ಮಲಗಿದ ವೇಳೆ ನಿಮ್ಮ ಪತ್ನಿ ಸುಳ್ಳು ಹೇಳಿದಂತೆ ಸ್ವಪ್ನ ಕಂಡರೆ ಇದು ಶುಭ ಶಕುನ. ನೀವು ಸದ್ಯದಲ್ಲಿಯೇ ಶ್ರೀಮಂತರಾಗಲಿದ್ದೀರಿ ಎಂದರ್ಥ.
ಯಾವುದಾದ್ರೂ ಹುಡುಗಿ ತನ್ನ ಬಾಯ್ ಫ್ರೆಂಡ್ ಭೇಟಿಯಾಗಲು ಹೋದಂತೆ ಕಂಡರೆ ಅವರ ಮದುವೆ ಶ್ರೀಮಂತ ವ್ಯಕ್ತಿಯ ಜೊತೆಯಾಗುತ್ತದೆ. ಇಲ್ಲವೆ ಮದುವೆ ನಂತ್ರ ಲಕ್ಷಾಧಿಪತಿಯಾಗ್ತಾರೆ.
ಕನಸಿನಲ್ಲಿ ಹಸು ಹಾಗೂ ಹಸುವಿನ ಕರು ಕಂಡರೆ, ಜೊತೆಗೆ ಹಸುವಿನ ಹಾಲನ್ನು ಕರು ಕುಡಿಯುತ್ತಿರುವಂತೆ ಕಂಡರೆ ಇದು ಬೇಗ ಲಕ್ಷಾಧಿಪತಿಯಾಗುವ ಚಿಹ್ನೆಯಾಗಿದೆ.
ಸಣ್ಣ ಮಗುವೊಂದು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯುತ್ತಿರುವಂತೆ ಸ್ವಪ್ನ ಬಿದ್ದರೆ, ಕೆಲವೇ ದಿನಗಳಲ್ಲಿ ನಿಮ್ಮ ಖಜಾನೆ ತುಂಬುವುದು ಗ್ಯಾರಂಟಿ.
ಇರುವೆಗಳು ಒಂದೇ ಸಾಲಿನಲ್ಲಿ ಚಲಿಸುತ್ತಿರುವಂತೆ ಕನಸು ಕಂಡರೆ ಅದು ಶುಭ ಶಕುನ.
ಸ್ವಪ್ನದಲ್ಲಿ ಯಾವುದಾದ್ರೂ ದೇವಾಲಯ ಅಥವಾ ದೇವಾಲಯದ ಕಲಶ ಕಂಡಲ್ಲಿ, ನಿಮ್ಮ ಮನೆಗೆ ಸಾಕ್ಷಾತ್ ಲಕ್ಷ್ಮಿ ಪ್ರವೇಶ ಮಾಡಲಿದ್ದಾಳೆ ಎಂದರ್ಥ.