alex Certify ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ

ಭಾರತದಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೆಲವೊಮ್ಮೆ ಡಯಾಬಿಟಿಸ್‌ ಇದೆ ಅನ್ನೋದು ಪತ್ತೆಯಾಗದೇ ಹೋಗಬಹುದು. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೇ ಇದ್ದರೆ ಅದರಿಂದ ಹಲವು ಸಮಸ್ಯೆಗಳಾಗುತ್ತವೆ. ಅಕಸ್ಮಾತ್‌ ನಿಮಗೇನಾದ್ರೂ ಸಕ್ಕರೆ ಕಾಯಿಲೆ ಇದ್ರೆ ನಿಮ್ಮ ಪಾದಗಳಲ್ಲಿ ಮೂರು ರೀತಿಯ ಬದಲಾವಣೆಗಳಾಗುತ್ತವೆ.

ಮಧುಮೇಹ ಇರುವಾಗ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇತ್ತೀಚೆಗೆ ಬಿಡುಗಡೆಯಾದ ಸಂಶೋಧನಾ ವರದಿಯ ಪ್ರಕಾರ, ಮಧುಮೇಹದ 3 ಲಕ್ಷಣಗಳು ಪಾದಗಳಲ್ಲಿಯೂ ಕಂಡುಬರುತ್ತವೆ. ಪ್ರತಿದಿನ ನಿಮ್ಮ ಪಾದಗಳನ್ನು ಗಮನಿಸುವುದು ಬಹಳ ಮುಖ್ಯ. ನಿಮ್ಮ ಪಾದಗಳಲ್ಲಿ ಯಾವುದೇ ವ್ಯತ್ಯಾಸವನ್ನು ಕಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಪಾದಗಳ ಬಣ್ಣ : ನಿಮ್ಮ ಪಾದಗಳು ಕೆಂಪಗಾಗುತ್ತಿದ್ರೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ಕೆಂಪು ಪಾದಗಳು ಮಧುಮೇಹದ ಸಂಕೇತವಾಗಿರಬಹುದು. ಪಾದಗಳು ಕೆಂಪಾಗುತ್ತಿರುವುದು ಗಮನಕ್ಕೆ ಬಂದರೆ ತಕ್ಷಣವೇ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿ.

ಬೆಚ್ಚಗಿನ ಪಾದಗಳು : ನಿಮ್ಮ ಪಾದಗಳು ಬಿಸಿಯಾಗಿದ್ದರೆ ಅದರ ಬಗ್ಗೆ ನೀವು ಗಮನ ಹರಿಸಬೇಕು. ನಿರಂತರವಾಗಿ ಪಾದಗಳು ಬಿಸಿಯಾಗುವುದು ಸಹ ಮಧುಮೇಹದ ಚಿಹ್ನೆಯಾಗಿರಬಹುದು. ನೀವು ಅಂತಹ ಯಾವುದೇ ರೋಗಲಕ್ಷಣವನ್ನು ಕಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಪಾದಗಳಲ್ಲಿ ಊತ : ನಿಮ್ಮ ಪಾದಗಳಲ್ಲಿ ಊತವಿದ್ದರೆ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಏಕೆಂದರೆ ಇದು ಕೂಡ ಮಧುಮೇಹದ ಲಕ್ಷಣವಾಗಿರಬಹುದು. ಕಾಲುಗಳಲ್ಲಿ ಊತ ಕಂಡುಬಂದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...