ಈಗಿನ ಜೀವನಶೈಲಿ, ವರ್ಕ್ ಲೋಡ್ ಇವೆಲ್ಲದರಿಂದ ಬೆನ್ನು ನೋವು ಸಮಸ್ಯೆ ಅನ್ನೋದು ಚಿಕ್ಕ ವಯಸಲ್ಲೇ ಬಂದುಬಿಡುತ್ತೆ. ತಾಸುಗಟ್ಟಲೇ ಕಂಪ್ಯೂಟರ್ ಮುಂದೆ ಕೂರುವವರು, ಅಡುಗೆ ಮನೆಯಲ್ಲಿ ನಿಂತುಕೊಂಡೇ ಕೆಲಸ ಮಾಡೋದು, ಹೈ ಹೀಲ್ಡ್ ಚಪ್ಪಲಿ ಹೀಗೆ ನಾನಾ ಕಾರಣಗಳು ಬೆನ್ನು ನೋವು ಸಮಸ್ಯೆ ಬರೋಕೆ ಮುಖ್ಯ ಕಾರಣ.
ಆದರೆ ಈ ಸಮಸ್ಯೆಗೆ ಮನೆ ಮದ್ದಿನ ಮೂಲಕವೇ ನೀವು ಪರಿಹಾರ ಕಂಡುಕೊಳ್ಳಬಹುದು. ಅರ್ಧ ಚಮಚ ಅರಿಶಿಣ ಪುಡಿಗೆ ಅರ್ಧ ಚಮಚ ಶುಂಠಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನ ನೀರಿನಲ್ಲಿ ಹಾಕಿ 10ರಿಂದ 15 ನಿಮಿಷ ಮೀಡಿಯಮ್ ಫ್ಲೇಮ್ನಲ್ಲಿ ಕಾಯಿಸಿ. ಅದು ತಣ್ಣಗಾದ ಬಳಿಕ ಇದಕ್ಕೆ ಜೇನುತುಪ್ಪ ಹಾಕಿ ದಿನಕ್ಕೆರಡು ಬಾರಿ ಕುಡಿಯಿರಿ. ಈ ರೀತಿ ಮಾಡೋದ್ರಿಂದ ನೋವು ಕಡಿಮೆಯಾಗುತ್ತೆ.
ಒಂದು ಗ್ರಾಂ ಔಡಲ ಕಾಯಿ ಎಲೆಯನ್ನ ರುಬ್ಬಿಕೊಂಡು ಆ ಪುಡಿಯನ್ನ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಆಯೋಡಿನ್ ಉಪ್ಪನ್ನೂ ಮಿಕ್ಸ್ ಮಾಡಿ. ಬಳಿಕ ಬೆನ್ನಿಗೆ ಮಸಾಜ್ ಮಾಡಿ. ಇದಾದ ಬಳಿಕ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿ.