ಜನ್ ಧನ್ ಖಾತೆಯು ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯಾಗಿದೆ. ಇದ್ರಲ್ಲಿ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ರುಪೇ ಕಾರ್ಡ್, ಓವರ್ ಡ್ರಾಫ್ಟ್ ಸೇರಿದಂತೆ ಅನೇಕ ಸೌಲಭ್ಯಗಳು ಸಿಗುತ್ತದೆ. ನೀವೂ ಈ ಖಾತೆಯನ್ನು ತೆರೆದಿದ್ದರೆ, ಈಗ್ಲೇ ಆಧಾರ್ ಜೊತೆ ಖಾತೆ ಲಿಂಕ್ ಮಾಡಿ. ಇಲ್ಲವಾದ್ರೆ ನಷ್ಟ ಅನುಭವಿಸಬೇಕಾಗುತ್ತದೆ.
ಈ ಖಾತೆಯಲ್ಲಿ ಗ್ರಾಹಕರಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ.ಇದರಲ್ಲಿ 1 ಲಕ್ಷ ರೂಪಾಯಿಗಳ ಅಪಘಾತ ವಿಮೆ ಲಭ್ಯವಿದೆ. ಆದರೆ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ ಈ ಲಾಭ ದೊರೆಯುವುದಿಲ್ಲ. ಒಂದು ಲಕ್ಷ ರೂಪಾಯಿಗಳನ್ನು ಕಳೆದುಕೊಳ್ಳುತ್ತೀರಿ. ಈ ಖಾತೆಯಲ್ಲಿ ಆಕಸ್ಮಿಕ ಸಾವಿನ ವಿಮಾ ರಕ್ಷಣೆ 30000 ರೂಪಾಯಿ. ಇದು ಆಧಾರ್ ಲಿಂಕ್ ಮಾಡಿದಾಗ ಮಾತ್ರ ಸಿಗಲಿದೆ.
ಜನ್ ಧನ್ ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡಲು ನೀವು ಬ್ಯಾಂಕ್ ಶಾಖೆಗೆ ಹೋಗಬಹುದು. ಆಧಾರ್ ಕಾರ್ಡ್ ನಕಲು, ಬ್ಯಾಂಕ್ ಪಾಸ್ಬುಕ್ ದಾಖಲೆ ರೂಪದಲ್ಲಿ ನೀಡಬೇಕಾಗುತ್ತದೆ.
ಕೆಲ ಬ್ಯಾಂಕ್ ಗಳು ಎಸ್ ಎಂ ಎಸ್ ಮೂಲಕ ಆಧಾರ್ ಲಿಂಕ್ ಗೆ ಅವಕಾಶ ನೀಡಿವೆ. ಎಸ್ಬಿಐ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಯುಐಡಿ <SPACE> ಆಧಾರ್ ಸಂಖ್ಯೆ <SPACE> ಖಾತೆ ಸಂಖ್ಯೆಯನ್ನು 567676 ಗೆ ಕಳುಹಿಸಬಹುದು.
ಹತ್ತಿರದ ಎಟಿಎಂನಿಂದ ಬ್ಯಾಂಕ್ ಖಾತೆಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಬಹುದು. ಆಧಾರ್ ಮತ್ತು ಬ್ಯಾಂಕ್ ನೀಡಿದ ಮೊಬೈಲ್ ಸಂಖ್ಯೆ ವಿಭಿನ್ನವಾಗಿದ್ದರೆ ಲಿಂಕ್ ಮಾಡಲಾಗುವುದಿಲ್ಲ.