alex Certify ಕೋಪಗೊಂಡ ಹೆಂಡತಿಯ ಮನವೊಲಿಸಲು ನೀವು ಇಷ್ಟು ಮಾಡಿದ್ರೆ ಸಾಕು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಪಗೊಂಡ ಹೆಂಡತಿಯ ಮನವೊಲಿಸಲು ನೀವು ಇಷ್ಟು ಮಾಡಿದ್ರೆ ಸಾಕು…..!

ಪತಿ-ಪತ್ನಿ ನಡುವಿನ ಸಂಬಂಧ ತುಂಬಾ ಸೂಕ್ಷ್ಮ. ಸಣ್ಣ ಪುಟ್ಟ ಕಾರಣಕ್ಕೆಲ್ಲ ಸಂಬಂಧವೇ ಮುರಿದು ಬೀಳಬಹುದು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ರೆ ಸಮಸ್ಯೆಯಾಗುತ್ತದೆ. ಕೆಲವೊಮ್ಮೆ ಕಾರಣವಿಲ್ಲದೇ ಕೋಪ, ಕಾರಣವಿಲ್ಲದೇ ಪ್ರೀತಿ ಇವೆಲ್ಲ ಮಾಮೂಲು.

ಆದರೆ ಗಂಡ-ಹೆಂಡತಿ ಜಗಳ ಉಂಡು ಮಲಗಿದ ಮೇಲೂ ಮುಗಿಯದೇ ದೀರ್ಘಕಾಲದವರೆಗೆ ಇದ್ದರೆ ಅದು ಸಂಬಂಧವನ್ನು ಅಪಾಯಕ್ಕೆ ತಳ್ಳಬಹುದು, ಅದಕ್ಕಾಗಿಯೇ ಪತಿ-ಪತ್ನಿ ಭಾವನಾತ್ಮಕ ಬಾಂಧವ್ಯವನ್ನು ಹೊಂದಿರುವುದು ಬಹಳ ಮುಖ್ಯ.

ಕೋಪಗೊಂಡ ಹೆಂಡತಿಯನ್ನು ಮನವೊಲಿಸುವುದು ಸುಲಭವಲ್ಲ ಅನ್ನೋದು ಎಲ್ಲಾ ಗಂಡಂದಿರಿಗೂ ತಿಳಿದಿರುವ ವಿಚಾರ. ಸಿಟ್ಟಲ್ಲಿರೋ ಪತ್ನಿಯನ್ನು ಒಲಿಸಿಕೊಳ್ಳಲು ಕೆಲವೊಂದು ಟ್ರಿಕ್ಸ್‌ ಅನ್ನು ನೀವು ಉಪಯೋಗಿಸಬೇಕು.

ಪತ್ನಿ ಏಕೆ ಕೋಪ ಮಾಡಿಕೊಂಡಿದ್ದಾಳೆ ಅನ್ನೋದನ್ನು ತಿಳಿದುಕೊಳ್ಳೋದು ಪತಿಯ ಮೊದಲ ಕೆಲಸ. ಹೆಂಡತಿಯ ಅಸಮಾಧಾನಕ್ಕೆ ಕಾರಣವೇ ಗೊತ್ತಿಲ್ಲದೇ ಇದ್ದರೆ ಪರಿಹಾರ ಹುಡುಕುವುದು ಕಷ್ಟವಾಗಬಹುದು. ಒಬ್ಬಂಟಿಯಾಗಿ ಕುಳಿತಾಗ ಹೆಂಡತಿಯೊಂದಿಗೆ ಮಾತನಾಡಿ. ಇದರಿಂದ ಪತ್ನಿಯ ಮನಸ್ಸಿಗಾದ ಕಿರಿಕಿರಿ ದೂರವಾಗುತ್ತದೆ. ಕೋಪ ಕಡಿಮೆ ಮಾಡಿಕೊಂಡು ಶಾಂತವಾಗಲು ಹೆಂಡತಿಗೆ ಸಮಯ ನೀಡಿ.

ಒತ್ತಡದ ಜೀವನಶೈಲಿಯಲ್ಲಿ ಕೆಲವೊಮ್ಮೆ ಮನೆ ಮತ್ತು ಕಚೇರಿ ಎರಡನ್ನೂ ನಿಭಾಯಿಸುವಾಗ ಹೆಂಡತಿ ಕೋಪಗೊಳ್ಳಬಹುದು. ಹೆಂಡತಿ ತುಂಬಾ ಕೋಪಗೊಂಡಿದ್ದರೆ, ಅವಳಿಗೆ ಸಮಾಧಾನ ಮಾಡಿಕೊಳ್ಳಲು ಸಮಯ ನೀಡಿ. ಆಕೆಯ ಪ್ರಶ್ನೆಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿದರೆ, ವಿಷಯ ಇನ್ನಷ್ಟು ಹದಗೆಡಬಹುದು. ಮಹಿಳೆಯರಿಗೆ ಹೂಗಳೆಂದರೆ ಇಷ್ಟ. ಸರ್ಪೈಸ್‌ ಗಿಫ್ಟ್‌ ಅಂತೂ ಅಚ್ಚುಮೆಚ್ಚು.

ಕೋಪಗೊಂಡ ಹೆಂಡತಿಯನ್ನು ಓಲೈಸಲು ಕಛೇರಿಯಿಂದ ಹಿಂತಿರುಗುವಾಗ ಸುಂದರವಾದ ಹೂಗುಚ್ಛವನ್ನು ತನ್ನಿ. ನಗುವ ಹೂಗಳನ್ನು ನೋಡಿ ಅವಳ ಸಿಟ್ಟೂ ಮಾಯವಾಗುತ್ತದೆ. ಶಾಪಿಂಗ್ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಮೊದಲ ಆಯ್ಕೆಯಾಗಿದೆ. ವಾರ್ಡ್‌ರೋಬ್‌ನಲ್ಲಿ ಎಷ್ಟು ಬಟ್ಟೆ ಇದ್ದರೂ, ಮಹಿಳೆ ಶಾಪಿಂಗ್ ಮಾಡದೆ ಇರಲು ಸಾಧ್ಯವಿಲ್ಲ, ನಿಮ್ಮ ಹೆಂಡತಿ ನಿಮ್ಮ ಮೇಲೆ ಕೋಪಗೊಂಡಿದ್ದರೆ, ನೀವು ಅವಳನ್ನು ಶಾಪಿಂಗ್ ಮಾಡಲು ಕರೆದೊಯ್ಯಿರಿ. ಶಾಪಿಂಗ್ ಸಮಯದಲ್ಲಿ ಅವಕಾಶ ನೋಡಿಕೊಂಡು ಕ್ಷಮೆ ಕೇಳಿಬಿಡಿ. ಹೀಗೆ ಮಾಡಿದರೆ ಹೆಂಡತಿಯ ಕೋಪ ನಿಮಿಷಗಳಲ್ಲಿ ಮಾಯವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...