ಬೆಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಮುಂದಿನ ವಾರ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆಯಿದೆ. ಆದ್ದರಿಂದ ಬ್ಯಾಂಕ್ ಕೆಲಸ ಇದ್ರೆ ಬೇಗ ಬೇಗ ಮುಗಿಸಿಕೊಳ್ಳುವುದು ಒಳಿತು.
ಹೌದು , ಈ ವಾರದಲ್ಲಿ ನಾಳೆ ಒಂದು ದಿನ ಮಾತ್ರ ಬ್ಯಾಂಕ್’ ಇರಲಿದ್ದು, ಶನಿವಾರ ರಜೆ ಇರಲಿದೆ. ಹಾಗೂ ಮುಂದಿನ ವಾರದಲ್ಲಿ ದೀಪಾವಳಿ ಪ್ರಯುಕ್ತ ಗುರುವಾರದಿಂದ ಭಾನುವಾರದವರೆಗೆ ರಜೆ ಇರಲಿದೆ. ಬ್ಯಾಂಕ್ ಕೆಲಸ ಇದ್ರೆ ಬೇಗ ಬೇಗ ಮುಗಿಸಿಕೊಳ್ಳುವುದು ಒಳಿತು.
ಆಂಧ್ರಪ್ರದೇಶ, ಗೋವಾ, ಕರ್ನಾಟಕ, ಕೇರಳ, ಪುದುಚೇರಿ, ತೆಲಂಗಾಣ ಮತ್ತು ತಮಿಳುನಾಡು, ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕುಗಳು ಅಕ್ಟೋಬರ್ 31 ರಂದು ಮುಚ್ಚಲ್ಪಡುತ್ತವೆ.
ನವೆಂಬರ್ 1 (ಶುಕ್ರವಾರ)
ದೀಪಾವಳಿ, ಕುಟ್ ಫೆಸ್ಟಿವಲ್ ಮತ್ತು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ತ್ರಿಪುರಾ, ಕರ್ನಾಟಕ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮೇಘಾಲಯ, ಸಿಕ್ಕಿಂ ಮತ್ತು ಮಣಿಪುರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ನವೆಂಬರ್ 2 (ಶನಿವಾರ)
ದೀಪಾವಳಿ (ಬಲಿ ಪ್ರತಿಪಾದ) / ಬಲಿಪಾಡ್ಯಮಿ / ಲಕ್ಷ್ಮಿ ಪೂಜೆ (ದೀಪಾವಳಿ) / ಗೋವರ್ಧನ್ ಪೂಜಾ / ವಿಕ್ರಮ್ ಸಂವಂತ್ ಹೊಸ ವರ್ಷದ ದಿನ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಉತ್ತರಾಖಂಡ್, ಸಿಕ್ಕಿಂ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ನವೆಂಬರ್ 3 (ಭಾನುವಾರ)
ಈ ರಾಜ್ಯಗಳಿಗೆ 4 ದಿನಗಳ ಕಾಲ ದೀರ್ಘ ರಜೆ
ಅಕ್ಟೋಬರ್ 31, ನವೆಂಬರ್ 1, ನವೆಂಬರ್ 2 ಮತ್ತು ನವೆಂಬರ್ 3 ರಂದು ಭಾನುವಾರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಸತತ 4 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.