alex Certify ನಿಮ್ಮ ದೇಹದ ಈ ಜಾಗದಲ್ಲಿ ಮಚ್ಚೆ ಇದ್ದರೆ ಶುಭವೂ – ಅಶುಭವೋ ತಿಳಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ದೇಹದ ಈ ಜಾಗದಲ್ಲಿ ಮಚ್ಚೆ ಇದ್ದರೆ ಶುಭವೂ – ಅಶುಭವೋ ತಿಳಿಯಿರಿ

 

ಹಸ್ತರೇಖೆ, ದೇಹದ ಪ್ರತಿಯೊಂದು ಅಂಗದ ವಿನ್ಯಾಸ ಹಾಗೂ ಭವಿಷ್ಯಕ್ಕಿರುವ ಸಂಬಂಧದ ಬಗ್ಗೆ ಸಮುದ್ರಶಾಸ್ತ್ರದಲ್ಲಿ ಹೇಳಲಾಗಿದೆ. ಮಚ್ಚೆಯ ಬಗ್ಗೆಯೂ ಸಮುದ್ರ ಶಾಸ್ತ್ರದಲ್ಲಿ ಹೇಳಲಾಗಿದೆ. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ರೆ ಶುಭ ಹಾಗೂ ಯಾವ ಭಾಗದಲ್ಲಿದ್ರೆ ಅಶುಭ ಎಂಬುದನ್ನು ಹೇಳಲಾಗಿದೆ.

ಸಮುದ್ರಶಾಸ್ತ್ರದ ಪ್ರಕಾರ, ಎಡ ಹುಬ್ಬಿನ ಮೇಲೆ ಮಚ್ಚೆಯಿದ್ರೆ ಅದು ಅಶುಭ. ಈ ವ್ಯಕ್ತಿಗೆ ದಾಂಪತ್ಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲಾಗುತ್ತದೆ.

ಕುತ್ತಿಗೆ ಹಾಗೂ ಭುಜ ಸೇರುವ ಭಾಗದಲ್ಲಿರುವ ಮಚ್ಚೆ ಶುಭಕರವಲ್ಲ. ಆದ್ರೆ ಕುತ್ತಿಗೆ ಹಿಂಭಾಗದಲ್ಲಿ ಮಚ್ಚೆಯಿದ್ರೆ ಶುಭ. ಗಂಟಲಿನ ಮೇಲೆ ಮಚ್ಚೆಯಿದ್ರೆ ದೀರ್ಘಾಯುಷಿ ಹಾಗೂ ಉತ್ತಮ ಕಂಠ ಹೊಂದಿದ ವ್ಯಕ್ತಿಯಾಗುತ್ತಾನೆ.

ಮೂಗಿನ ಎಡಭಾಗದಲ್ಲಿ ಮಚ್ಚೆಯಿದ್ರೆ ಅಶುಭ. ಇಂಥ ವ್ಯಕ್ತಿಗೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ಛಲ ಸಾಧಿಸಲು ಸಾಕಷ್ಟು ಶ್ರಮ ಅಗತ್ಯವಿರುತ್ತದೆ.

ಕಿವಿ ಕೆಳಗೆ ಮಚ್ಚೆಯಿದ್ರೆ ಕೌಟುಂಬಿಕ ವಿಚಾರದಲ್ಲಿ ಶುಭವಲ್ಲ. ಇಂಥ ವ್ಯಕ್ತಿಗಳು ಕುಟುಂಬದ ಜವಾಬ್ದಾರಿ ಹಾಗೂ ವಿವಾಹ ಜೀವನದಲ್ಲಿ ಕಡಿಮೆ ಆಸಕ್ತಿ ಹೊಂದಿರುತ್ತಾರೆ.

ಎರಡೂ ಭುಜದ ಮೇಲೆ ಮಚ್ಚೆ ಹೊಂದಿರುವ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಕಷ್ಟ ಎದುರಿಸುತ್ತಾನೆ. ಯಾವುದೇ ಯಶಸ್ಸು ಆತನಿಗೆ ಸುಲಭವಾಗಿ ಸಿಗುವುದಿಲ್ಲ.

ಮಣಿಕಟ್ಟಿನ ಮೇಲಿರುವ ಮಚ್ಚೆ ಕೂಡ ಶುಭಕರವಲ್ಲ. ಸಮುದ್ರಶಾಸ್ತ್ರದಲ್ಲಿ ಇದು ದುಃಖ ತರುತ್ತದೆ ಎನ್ನಲಾಗಿದೆ.

ಕಾಲುಗಳ ಬೆರಳಿನ ಮಧ್ಯೆ ಮಚ್ಚೆಯಿದ್ರೆ ಅದನ್ನು ಅಮಂಗಳಕರ ಎನ್ನಲಾಗುತ್ತದೆ. ವಿವೇಕ ಬಳಸದೆ ಬೇರೆಯವರ ಬುದ್ದಿಯಲ್ಲಿ ಕೆಲಸ ಮಾಡುವವನಾಗಿರುತ್ತಾನೆ.

– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...