R aಬೆಂಗಳೂರು : ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆ ಕುರಿತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಆರ್ ಅಶೋಕ್ ನಿಮಗೆ ಬಹಳ ಪ್ರೀತಿ ಇದ್ದರೆ ಕನಕಪುರವನ್ನೇ ಒಂದು ಜಿಲ್ಲೆ ಮಾಡಿಬಿಡಿ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಉಚಿತ ಘೋಷಣೆ ಮಾಡಿದ್ದು ಕೊಡಲು ಇವರ ಹತ್ತಿರ ಕಾಸಿಲ್ಲ. ಇನ್ನು ಬ್ರ್ಯಾಂಡ್ ಬೆಂಗಳೂರು ಹೇಗೆಮಾಡುತ್ತೀರಾ? ಫೋಟೋ ತೆಗೆದುಕೊಳ್ಳೋದು ಅಷ್ಟೇ ಬ್ಯ್ರಾಂಡ್ ಬೆಂಗಳೂರು ಆಗಿದೆ. ನಿಮಗೆ ಬಹಳ ಪ್ರೀತಿ ಇದ್ದರೆ ಕನಕಪುರವನ್ನೇ ಒಂದು ಜಿಲ್ಲೆ ಮಾಡಿಬಿಡಿ. ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ಜಗಳದಲ್ಲಿ ಬೆಂಗಳೂರು ಬಡವಾಗಿದೆ ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.