ಅವಕಾಶ ಸಿಕ್ಕಲ್ಲಿ, ಜೀವನದಲ್ಲಿ ಒಮ್ಮೆ, ವಿಶ್ವದ ಕೆಲ ಪ್ರದೇಶಗಳಿಗೆ ಅವಶ್ಯಕವಾಗಿ ಭೇಟಿ ನೀಡಿ.
ಸ್ಯಾನ್ ಫ್ರಾನ್ಸಿಸ್ಕೋ : ನೀವು ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಮೊದಲ ಸ್ಥಾನದಲ್ಲಿ ಬರುತ್ತದೆ. ಇದು, ಅಮೆರಿಕಾದ ಪ್ರಸಿದ್ಧ ಸ್ಥಳಗಳಲ್ಲಿ ಒಂದು. ಕೊರೊನಾ ಸಂದರ್ಭ ಹಾಗೂ ಲಾಕ್ ಡೌನ್ ವೇಳೆ ಅಲ್ಲಿ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಕೊರೊನಾ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡಿಕೊಂಡಿದ್ದಾರೆ.
ನೆದರ್ಲ್ಯಾಂಡ್ಸ್ ನ ಆಮ್ಸ್ಟರ್‌ಡ್ಯಾಮ್ : ಲಾಕ್ ಡೌನ್ ಸಂದರ್ಭದಲ್ಲಿ ಇಲ್ಲಿನ ಜನರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಆಮ್ಸ್ಟರ್ ಡ್ಯಾಮ್ನ ಸೌಂದರ್ಯ, ಇತಿಹಾಸದ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತದೆ. ಮದ್ಯಪಾನದಂತಹ ಚಟದಿಂದ ಜನರನ್ನು ಹೊರತರಲು ಪ್ರಯತ್ನ ನಡೆಯುತ್ತಿದೆ.
ಮ್ಯಾಂಚೆಸ್ಟರ್ : ಯುಕೆಯ ಮ್ಯಾಂಚೆಸ್ಟರ್, ಸಂಸ್ಕೃತಿ ಮತ್ತು ಸಮುದಾಯದ ವಿಷ್ಯದಲ್ಲಿ ಅತ್ಯುತ್ತಮ ಶ್ರೇಯಾಂಕ ಪಡೆದಿದೆ. ಕೊರೊನಾ ಸಂದರ್ಭದಲ್ಲಿ, ಅನೇಕ ಕಂಪನಿಗಳು ಜನರಿಗೆ ಅಗತ್ಯ ಆಹಾರ, ವಸ್ತುಗಳನ್ನು ಒದಗಿಸಿದ್ದವು.
ನ್ಯೂಯಾರ್ಕ್ : ಯುಎಸ್ ನ ನ್ಯೂಯಾರ್ಕ್, ಉತ್ತರ ಅಮೆರಿಕಾ ನಗರಗಳಲ್ಲಿಯೇ ದಿ ಬೆಸ್ಟ್ ನಗರವಾಗಿದೆ. ಕೊರೊನಾ ಮಹಾಮಾರಿಯಿಂದ ಹೊರಬರಲು ಈ ಪ್ರದೇಶದಲ್ಲಿ ಸಾಕಷ್ಟು ಯಶಸ್ವಿ ಪ್ರಯತ್ನ ನಡೆದಿದೆ. ಕೊರೊನಾ ಲಸಿಕೆ ಪಡೆಯುವಂತೆ ಈ ನಗರದಲ್ಲಿ ಜನರನ್ನು ಪ್ರೋತ್ಸಾಹಿಸಲಾಗ್ತಿದೆ.
ಪೋರ್ಟೊ : ಪೋರ್ಚುಗಲ್ ನ ಪೋರ್ಟೊ ಅತ್ಯಂತ ಪ್ರಸಿದ್ಧ ನಗರವಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಕ್ಕೆ ಇದು ಹೆಸರುವಾಸಿಯಾಗಿದೆ.
ಟೋಕಿಯೊ : ಜಪಾನ್ ನ ಟೋಕಿಯೋ ಜನರು ಕೊರೊನಾ ಮಹಾಮಾರಿಗೂ ಮೊದಲೇ ಮಾಸ್ಕ್ ಧರಿಸುತ್ತಿದ್ದರು. ಅನೇಕ ಹೊಸ ಹೊಸ ಪ್ರಯೋಗಗಳನ್ನು ಇಲ್ಲಿನ ಜನರು ಮಾಡ್ತಿರುತ್ತಾರೆ. ಸಾರ್ವಜನಿಕ ಶೌಚಾಲಯದ ಬಗ್ಗೆ ಜನರ ಆಲೋಚನೆ ಬದಲಿಸಲು ಡಿಜೈನ್ ಸಾರ್ವಜನಿಕ ಶೌಚಾಲಯವನ್ನು ಇತ್ತೀಚಿಗೆ ನಿರ್ಮಿಸಲಾಗಿದೆ.