ಜ್ಯೋತಿಷ್ಯ ಶಾಸ್ತ್ರದಲ್ಲಿ ಮನೆಯ ಕೆಲ ಭಾಗಗಳನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸ್ಥಳದಲ್ಲಿ ಚಪ್ಪಲಿ, ಶೂ ಧರಿಸುವಂತಿಲ್ಲ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಚಪ್ಪಲಿಯನ್ನು ಸರಿಯಾದ ಸ್ಥಳದಲ್ಲಿಟ್ಟರೆ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ.
ಮನೆಗೆ ಅವಶ್ಯವಿರುವುದಕ್ಕಿಂತ ಹೆಚ್ಚಿನ ವಸ್ತುವನ್ನು ಮಹಿಳೆಯರು ಮನೆಯಲ್ಲಿಡುತ್ತಾರೆ. ಈ ವಸ್ತುಗಳನ್ನಿಡುವ ಸ್ಥಳದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಇದು ಮನೆಯ ಪವಿತ್ರ ಸ್ಥಳಗಳಲ್ಲಿ ಒಂದು. ಈ ಸ್ಥಳಕ್ಕೆ ಚಪ್ಪಲಿ ಧರಿಸಿ ಹೋಗಬಾರದು.
ಹೊಸ ಚಪ್ಪಲಿಯನ್ನು ಅನೇಕರು ಕಪಾಟಿನಲ್ಲಿಡುತ್ತಾರೆ. ಇದು ತಪ್ಪು. ಮನೆಯ ಕಪಾಟಿನಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ. ಹಣವಿಡುವ ಜಾಗದಲ್ಲಿ ಎಂದೂ ಚಪ್ಪಲಿ ಇಡಬಾರದು. ಇದು ಲಕ್ಷ್ಮಿ ಕೋಪಕ್ಕೆ ಕಾರಣವಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ ಅಡಿಗೆ ಮನೆಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಅಡುಗೆ ಮನೆ ಸದಾ ಸ್ವಚ್ಛವಾಗಿರಬೇಕು. ಅಲ್ಲಿ ತಾಯಿ ಲಕ್ಷ್ಮಿ ಹಾಗೂ ಅನ್ನಪೂರ್ಣೆ ನೆಲೆಸಿರುತ್ತಾಳೆ. ಅಡುಗೆ ಮನೆಯಲ್ಲಿ ಆರೋಗ್ಯವಿದೆ. ತಾಯಿ ಲಕ್ಷ್ಮಿ ಹಾಗೂ ಅನ್ನಪೂರ್ಣೆ ನೆಲೆಸಿರುವ ಜಾಗದಲ್ಲಿ ಚಪ್ಪಲಿ ಧರಿಸಬಾರದು.
ದೇವರು ನೆಲಸುವ ಸ್ಥಳ ದೇವರ ಮನೆ. ಅಲ್ಲಿ ಎಂದೂ ಚಪ್ಪಲಿ ಧರಿಸಿ ಹೋಗಬಾರದು. ದೇವರ ಮನೆಗೆ ಚಪ್ಪಲಿ ಧರಿಸಿ ಹೋದಲ್ಲಿ ಆರ್ಥಿಕ ನಷ್ಟ, ಆರೋಗ್ಯ ಸಮಸ್ಯೆ, ಅಶಾಂತಿ ಕಾಡುತ್ತದೆ.