ಜ್ಯೋತಿಷ್ಯದಲ್ಲಿ ದೌರ್ಭಾಗ್ಯ ದೂರ ಮಾಡಿ ಸೌಭಾಗ್ಯ ತರುವಂತಹ ಅನೇಕ ಉಪಾಯಗಳನ್ನು ಹೇಳಲಾಗಿದೆ. ಅದ್ರಂತೆ ನಡೆದುಕೊಂಡಲ್ಲಿ ಧನ ಸಂಪತ್ತು ವೃದ್ಧಿಯಾಗಿ ಸುಖ-ಶಾಂತಿ ಸದಾ ಮನೆಯಲ್ಲಿ ನೆಲೆಸಿರುತ್ತದೆ.
ಶನಿವಾರ ರಾತ್ರಿ ಹನುಮಂತ ಅಥವಾ ಶಿವಲಿಂಗದ ಮುಂದೆ ಎಣ್ಣೆ ದೀಪವನ್ನು ಹಚ್ಚಿ. ಇದು ಬಹಳ ಚಮತ್ಕಾರಿ ಉಪಾಯವಾಗಿದೆ. ಪ್ರತಿದಿನ ರಾತ್ರಿ ಶಿವಲಿಂಗದ ಮುಂದೆ ಎಣ್ಣೆ ದೀಪ ಹಚ್ಚುವುದ್ರಿಂದ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ನಿಲ್ಲುತ್ತಾಳೆಂಬ ನಂಬಿಕೆಯಿದೆ.
ಹನುಮಾನ್ ಚಾಲೀಸ ಅಥವಾ ಸುಂದರಕಾಂಡವನ್ನು ಓದಿ. ಭಜರಂಗ ಬಲಿಗೆ ಕುಂಕುಮ, ಮಲ್ಲಿಗೆ ಎಣ್ಣೆ ಹಾಗೂ ಅಡಿಕೆ ಎಲೆಯನ್ನು ಅರ್ಪಿಸಿ.
ಶನಿವಾರ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದ್ರಲ್ಲಿ ನಿಮ್ಮ ಮುಖ ನೋಡಿಕೊಳ್ಳಿ. ನಂತ್ರ ಈ ಎಣ್ಣೆಯನ್ನು ದೇವಸ್ಥಾನಕ್ಕೆ ದಾನವಾಗಿ ನೀಡಿ.
ಶನಿವಾರ ಶಿವಲಿಂಗಕ್ಕೆ ಕಪ್ಪು ಎಳ್ಳು ಮತ್ತು ನೀರನ್ನು ಅರ್ಪಿಸಿ. ಇದು ಅನಾರೋಗ್ಯದಿಂದ ಮುಕ್ತಿ ನೀಡುತ್ತದೆ.
ಪ್ರತಿ ಶನಿವಾರ ಹಾಗೂ ಅಮವಾಸ್ಯೆಯಂದು ಅಶ್ವತ್ಥ ಮರವನ್ನು ಏಳು ಸುತ್ತ ಪ್ರದಕ್ಷಿಣೆ ಹಾಕಿ.
ಅಶ್ವತ್ಥ ಮರಕ್ಕೆ ತಾಮ್ರದ ಬಿಂದಿಗೆಯಿಂದ ನೀರನ್ನು ಹಾಕಿ. ಪ್ರತಿ ಶನಿವಾರ ಇದನ್ನು ಮಾಡಿ. ಇದು ಜಾತಕ ದೋಷವನ್ನು ನಿವಾರಿಸುತ್ತದೆ.