ಮನೆಯಲ್ಲಿ ಸುಖ ಹಾಗೂ ಸಮೃದ್ಧಿ ನೆಲೆಸಲೆಂದು ಪ್ರಾಚೀನ ಕಾಲದಿಂದಲೂ ಅನೇಕ ಪದ್ಧತಿಗಳನ್ನು ಪಾಲಿಸಿಕೊಂಡು ಬರಲಾಗ್ತಾ ಇದೆ. ಯಾರ ಮನೆಯಲ್ಲಿ ಈಗಲೂ ಆ ಪದ್ಧತಿಗಳು ಜಾರಿಯಲ್ಲಿವೆಯೋ ಆ ಮನೆಯಲ್ಲಿ ಸದಾ ಸುಖ- ಸಮೃದ್ಧಿ ನೆಲೆಸಿರುತ್ತದೆ. ಆ ಮನೆ ಸುತ್ತಮುತ್ತ ಯಾವುದೇ ಕೆಟ್ಟ ಶಕ್ತಿಗಳು ಸುಳಿಯುವುದಿಲ್ಲ.
ಗೋಮಾತೆಯಲ್ಲಿ ಎಲ್ಲ ದೇವತೆಗಳು ನೆಲೆಸಿವೆ ಎಂಬ ನಂಬಿಕೆ ಇದೆ. ಗೋವಿನ ಸಗಣಿ, ಹಾಲು, ಮೊಸರು, ಬೆಣ್ಣೆ, ತುಪ್ಪದಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಜೊತೆಗೆ ಗೋ ಮೂತ್ರದಲ್ಲಿ 46 ರೀತಿಯ ಔಷಧಿಗಳನ್ನು ತಯಾರಿಸಲಾಗ್ತಾ ಇದೆ.
ವಾಸ್ತುದೋಷ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಾಸ್ತುದೋಷ ನಿವಾರಣೆಗಾಗಿ ಗೋ ಮೂತ್ರವನ್ನು ಮನೆಯ ಮೂಲೆ ಮೂಲೆಗೂ ಚಿಮುಕಿಸಿ. ಇದರಿಂದ ಅನೇಕ ವಾಸ್ತುದೋಷಗಳು ಪರಿಹಾರವಾಗಲಿವೆ.
ಗೋ ಮೂತ್ರದ ವಾಸನೆಯಿಂದ ಅನೇಕ ಹಾನಿಕಾರಕ ಕೀಟಾಣುಗಳು ನಾಶವಾಗುತ್ತವೆ. ಇದರಿಂದ ಮನೆಯಲ್ಲಿರುವವರ ಆರೋಗ್ಯ ಸುಧಾರಿಸುತ್ತದೆ.
ನಿಯಮಿತ ರೂಪದಲ್ಲಿ ಯಾರ ಮನೆಯಲ್ಲಿ ಗೋ ಮೂತ್ರವನ್ನು ಸಿಂಪಡಿಸಲಾಗುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಧನ- ಧಾನ್ಯದ ಕೊರತೆಯಾಗುವುದಿಲ್ಲ.
ಪ್ರತಿದಿನ ಗೋಮೂತ್ರ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶರೀರ ಆರೋಗ್ಯ ಹಾಗೂ ಶಕ್ತಿಯುತವಾಗಿರುತ್ತದೆ.
ಗೋಮೂತ್ರದಲ್ಲಿ ಗಂಗೆ ನೆಲೆಸಿರ್ತಾಳೆ. ಗೋಮೂತ್ರ ಸೇವನೆಯಿಂದ ಎಲ್ಲ ಪಾಪಗಳು ತೊಳೆದು ಹೋಗ್ತವೆ.
ಭೂತ- ಪ್ರೇತಗಳಿಂದ ಬಳಲುತ್ತಿರುವ ವ್ಯಕ್ತಿಗೆ ಗೋಮೂತ್ರ ಹಾಕಿದಲ್ಲಿ ಭೂತ ಆತನ ಶರೀರವನ್ನು ಬಿಟ್ಟು ಹೋಗುತ್ತದೆ.