alex Certify ಈ ವಿಧಾನ ಅನುಸರಿಸಿದ್ರೆ ಕರಗುತ್ತೆ ಅಧಿಕ ಕೊಲೆಸ್ಟ್ರಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಧಾನ ಅನುಸರಿಸಿದ್ರೆ ಕರಗುತ್ತೆ ಅಧಿಕ ಕೊಲೆಸ್ಟ್ರಾಲ್

ವ್ಯಾಯಾಮ ಮಾಡಬೇಕೆಂದು ಎಂದುಕೊಳ್ಳುವವರಿಗೆ ಬೆಲೆಬಾಳುವ ಉಪಕರಣಗಳೇ ಅಗತ್ಯವಿಲ್ಲ. ಮನೆಯಲ್ಲಿಯೇ ಗೋಡೆಯನ್ನು ಆಧಾರವಾಗಿಸಿಕೊಂಡು ದೇಹವನ್ನು ಸದೃಢವಾಗಿಸಿಕೊಳ್ಳಬಹುದು. ಅದು ಹೇಗೆ ನೋಡೋಣ.

ಹಾಫ್ ಮೂನ್

ಮೊದಲು ಗೋಡೆಗೆ ಸ್ವಲ್ಪ ದೂರದಲ್ಲಿ ವಿರುದ್ಧ ದಿಕ್ಕಿನಲ್ಲಿ ನಿಲ್ಲಬೇಕು. ಈಗ ಬಲಗಾಲನ್ನು ಮೇಲೆತ್ತಿ ಗೋಡೆಗೆ ತಾಗುವಂತೆ ಇರಿಸಿ ಭಾರ ಮಾತ್ರ ಎಡಗಾಲ ಮೇಲೆ ಇರಿಸಬೇಕು. ಕೈಗಳನ್ನು ತ್ರಿಕೋಣಾಕಾರದ ಸ್ಟ್ಯಾಂಡ್ ಮೇಲಿರಿಸಿ ಆರು ಸಲ ಉಸಿರು ತೆಗೆದುಕೊಳ್ಳಬೇಕು. ಈಗ ಬಲಗಾಲು ಇಳಿಸಿ ಎಡಗಾಲನ್ನು ಗೋಡೆಗೆ ತಾಗಿಸಿರಬೇಕು. ಹೀಗೆ ಮಾಡುವುದರಿಂದ ದೇಹವೆಲ್ಲ ರಕ್ತ ಪ್ರಸರಣ ಜರುಗಿ ಪ್ರತಿ ಭಾಗ ಪೂರ್ಣವಾಗಿ ಆರೋಗ್ಯಕರ ಶಕ್ತಿ ಪಡೆಯುತ್ತದೆ. ಇತರ ವ್ಯಾಯಾಮಗಳು ಮಾಡಿದಾಗ ಬಳಲಿಕೆ ಉಂಟಾಗದಂತೆ ಮಾಡುತ್ತದೆ.

ಟ್ವಿಸ್ಟೆಡ್ ಹಾಫ್ ಮೂನ್

ಗೋಡೆಗೆ ಸ್ವಲ್ಪ ದೂರದಲ್ಲಿ ನೇರವಾಗಿ ನಿಲ್ಲಬೇಕು. ಸ್ಟ್ಯಾಂಡ್ ಇಲ್ಲವೇ ಎತ್ತರದಲ್ಲಿರುವ ಸಣ್ಣ ಸ್ಟೂಲ್ ತೆಗೆದುಕೊಂಡು ನಿಧಾನವಾಗಿ ಎಡಗಾಲನ್ನು 90 ಡಿಗ್ರಿ ಕೋನದಲ್ಲಿ ಇರಿಸಿ ಗೋಡೆಗೆ ಕಾಲು ತಾಗಿಸಬೇಕು. ಎಡಗೈ ಮಾತ್ರ ಸ್ಟ್ಯಾಂಡ್ ಮೇಲಿರಿಸಿ ಬಲಗೈಯನ್ನು ಸ್ವಲ್ಪ ಹಿಂದಕ್ಕೆ ಸ್ಟ್ರಚ್ ಮಾಡಿ ಭಾರವನ್ನು ಬಲಗಾಲ ಮೇಲಿರಿಸಬೇಕು. ಇದರಿಂದ ಕಾಲುಗಳ ಖಂಡಗಳು ಮುಖ್ಯವಾಗಿ ಕಾಲು ಮುಂದಿನ ಭಾಗದಲ್ಲಿರುವ ಖಂಡ ಸರಿಯಾಗಿ ಸ್ಟ್ರಚ್ ಆಗುತ್ತದೆ. ಆರು ಸಲ ಉಸಿರು ತೆಗೆದುಕೊಂಡ ನಂತರ ಮತ್ತೊಂದು ಕಾಲಿನಿಂದ ಮಾಡಬೇಕು. ಹೀಗೆ ಮಾಡುವುದರಿಂದ ವಾಕಿಂಗ್, ಜಾಗಿಂಗ್ ದೊಂದಿಗೆ ಯಾವುದೇ ವ್ಯಾಯಾಮ ಮಾಡಿದರೂ ಬಳಲಿಕೆ ಉಂಟಾಗದು.

ಹ್ಯಾಂಡ್ ಟು ಬಿಗ್ ಟೋ ವಾಜ್

ದೇಹವನ್ನು ಸಾಧ್ಯವಾದಷ್ಟು ಸ್ಟ್ರಚ್ ಮಾಡುವ ವ್ಯಾಯಾಮವಿದ್ದು, ಮೊದಲು ಗೋಡೆಯ ಮುಂದೆ ನಿಂತು ಎಡಗಾಲನ್ನು ಗೋಡೆಯತ್ತ ಇರಿಸಬೇಕು. ಎರಡು ಕೈಗಳನ್ನು ವಿಶಾಲವಾಗಿ ಚಾಚಿ ಕಾಲು ತಿರುಗಿಸದೆ ಸೊಂಟ, ಎದೆ, ಕೈಗಳನ್ನು ಎಡಗಡೆ ತಿರುಗಿಸಬೇಕು. ಇದರಿಂದ ನಡುಭಾಗ ಸರಿಯಾಗಿ ಸ್ಟ್ರಚ್ ಆಗಿ ಹೆಚ್ಚಿನ ಕೊಬ್ಬು ಕರಗುತ್ತದೆ. ಹೊಟ್ಟೆ ಬಳಿ ಇರುವ ಕೊಬ್ಬು ಕೂಡ ಕರಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...