ಇಂದಿನ ಆಹಾರ ಪದ್ಧತಿ ನಮ್ಮ ಬೊಜ್ಜಿಗೆ ಕಾರಣವಾಗಿದೆ. ಹೊರಗಿನ ಆಹಾರಕ್ಕೆ ಯಾವ ಎಣ್ಣೆ ಬಳಸ್ತಾರೆಂಬುದು ನಮಗೆ ತಿಳಿದಿರೋದಿಲ್ಲ. ರುಚಿ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಂಡು ಜಿಮ್ ಗೆ ಅಲೆಯೋದು ಈಗ ಮಾಮೂಲಿಯಾಗಿದೆ.
ತೂಕ ಏರಿಸಿಕೊಳ್ಳೋದು ಇತ್ತೀಚಿಗೆ ಸುಲಭ. ಆದ್ರೆ ತೂಕ ಕಡಿಮೆ ಮಾಡಿಕೊಳ್ಳೋದು ದೊಡ್ಡ ಸವಾಲಿನ ಕೆಲಸ. ಆಹಾರದಲ್ಲಿ ನಿಯಂತ್ರಣದ ಜೊತೆ ಹಗಲು-ರಾತ್ರಿ ವ್ಯಾಯಾಮ, ಜಿಮ್, ಯೋಗ ಮಾಡಿದ್ರೂ ತೂಕ ಮಾತ್ರ ಕಡಿಮೆಯಾಗೋದಿಲ್ಲ ಎನ್ನುವವರು ಅನೇಕರು. ಕೆಲವರು ಹೆಚ್ಚಾಗಿರುವ ಹೊಟ್ಟೆ ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆ ಕೂಡ ಮಾಡಿಸಿಕೊಳ್ಳುತ್ತಾರೆ.
ಸುಲಭ ಉಪಾಯವೊಂದರ ಮೂಲಕ ನೀವು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ರಾತ್ರಿಯಲ್ಲಿ ನಿಮಗೆ ಪರಿಣಾಮ ಕಾಣಲಿದೆ. ರಾತ್ರಿ ಮಲಗುವ ಮೊದಲು ಒಂದು ದೊಡ್ಡ ಟವೆಲ್ ಗೆ ಬಿಸಿ ಅಥವಾ ತಣ್ಣನೆಯ ನೀರು ಹಾಕಿ ಒದ್ದೆ ಮಾಡಿಕೊಳ್ಳಿ. ಆ ಟವೆಲ್ ಹೊಟ್ಟೆ ಮೇಲಿಟ್ಟು, ಅದ್ರ ಮೇಲೆ ಬಟ್ಟೆಯೊಂದನ್ನು ಕಟ್ಟಿ ಮಲಗಿ. ಬೆಳಿಗ್ಗೆ ಎಚ್ಚರವಾದ ತಕ್ಷಣ ಟವೆಲ್ ತೆಗೆದುಬಿಡಿ. ಇದು ಜೀರ್ಣಕ್ರಿಯೆ ಸುಲಭ ಮಾಡುವ ಜೊತೆಗೆ ಕೊಬ್ಬು ಹೆಚ್ಚು ಮಾಡುವ ಜೀವಕೋಶಗಳನ್ನು ನಿಯಂತ್ರಣದಲ್ಲಿಡುತ್ತದೆ.