ಸಾಮಾನ್ಯವಾಗಿ ನೀವು ಎಷ್ಟು ದೊಡ್ಡ ರೋಲ್ ಗಳನ್ನು ತಿಂದಿದ್ದೀರಾ..? ಮಾಮೂಲಿ ಚಪಾತಿಯಷ್ಟು ದೊಡ್ಡದಾದ ರೋಲ್ ತಿಂದಿರುತ್ತೀರಿ ಅಲ್ವಾ. ಆದರೆ, ಇಲ್ಲೊಂದೆಡೆ 10 ಕೆ.ಜಿ.ಯ ಬೃಹತ್ ರೋಲ್ ತಯಾರಿಸಲಾಗಿದೆ.
ದೆಹಲಿಯ ಮಾಡೆಲ್ ಟೌನ್ 3 ರ ಅಂಗಡಿಯಲ್ಲಿ ಈ ಬೃಹತ್ ರೋಲ್ ತಯಾರಿಸಲಾಗಿದೆ. 10 ಕೆ.ಜಿ.ಯ ಈ ರೋಲ್ ಅನ್ನು 20 ನಿಮಿಷಗಳಲ್ಲಿ ತಿಂದು ಮುಗಿಸಿದರೆ 20,000 ರೂ. ಹಣ ಕೊಡುತ್ತಾರಂತೆ..!
BIG NEWS: ಮೆಟ್ರೋ ಕಾಮಗಾರಿ ವೇಳೆ ಅವಘಡ; ತಪ್ಪಿದ ಭಾರಿ ಅನಾಹುತ
ದಿ ಫುಡ್ ಕಲ್ಟ್ ಅನ್ನೋ ಇನ್ಸ್ಟಾಗ್ರಾಂ ಪೇಜ್, ಅಂಗಡಿಯ ಮಾಲೀಕರು ದೈತ್ಯ ರೋಲ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಗೋಧಿ ಹಿಟ್ಟಿನಿಂದ ಬೃಹತ್ ರೋಲ್ ತಯಾರಿಸಿ ಪ್ಯಾನ್ಗೆ ಹಾಕುತ್ತಾನೆ. ನಂತರ ಆತ ಒಟ್ಟು 30 ಮೊಟ್ಟೆಗಳನ್ನು ರೋಲ್ಗೆ ಸೇರಿಸುತ್ತಾನೆ. ಈ ರೋಲ್ ಗೆ ನೂಡಲ್ಸ್, ಕಬಾಬ್ ಮತ್ತು ಸೋಯಾ ಚಾಪ್ ಅನ್ನು ಕೂಡ ಸೇರಿಸಲಾಗಿದೆ.
20 ನಿಮಿಷಗಳಲ್ಲಿ ದೈತ್ಯ ರೋಲ್ ಅನ್ನು ಮುಗಿಸುವುದು ಅಸಾಧ್ಯವಾದರೂ, ಅದನ್ನು ತಿಂದ ನಂತರ ನೀವು, ಖಂಡಿತವಾಗಿಯೂ ರೆಸ್ಟ್ ರೂಂನಲ್ಲಿ ಹೆಚ್ಚುವರಿ ಸಮಯವನ್ನು ಕಳೆಯುತ್ತೀರಿ ಎಂದು ನಿರೀಕ್ಷಿಸುವುದು ಕಷ್ಟವೇನಲ್ಲ.
https://youtu.be/sb28Nfjgm90