ನಿದ್ರೆ ಮನುಷ್ಯನಿಗೆ ಬಹಳ ಮುಖ್ಯ. ದಿನದಲ್ಲಿ 7 ಗಂಟೆ ನಿದ್ರೆ ಮಾಡದೆ ಹೋದಲ್ಲಿ ಅನೇಕ ಸಮಸ್ಯೆ ಎದುರಾಗುತ್ತದೆ. ಹಾಗಂತ, ರಾತ್ರಿ ನಿದ್ರೆ ಮಾಡದೆ ಬೆಳಿಗ್ಗೆ ಕಚೇರಿಯಲ್ಲಿ ನಿದ್ರೆ ಮಾಡುವುದು ಸರಿಯಲ್ಲ. ಕಚೇರಿಯಲ್ಲಿ ಕೆಲಸ ಬಿಟ್ಟು ನಿದ್ರೆ ಮಾಡಿದ್ರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಆದ್ರೆ ಜಪಾನ್ ನಲ್ಲಿ ಕಚೇರಿಯಲ್ಲಿಯೂ ನಿದ್ರೆ ಮಾಡಬಹುದು.
ಯಸ್, ಜಪಾನ್ ಜನರು, ಕಚೇರಿಯಲ್ಲಿ ನಿದ್ರೆ ಮಾಡುವುದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಕಚೇರಿಯಲ್ಲಿ ನಿದ್ರೆ ಮಾಡಿದ್ರೆ ಯಾರೂ ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಇದನ್ನು ಇನ್ಮುರಿ ಎಂದು ಕರೆಯಲಾಗುತ್ತದೆ. ಇನ್ಮುರಿ ಎಂದ್ರೆ ಗೋಲ್ಡ್ ಆನ್ ಡ್ಯೂಟಿ ಎಂದರ್ಥ. ಇನ್ಮುರಿ ಜಪಾನ್‌ನಲ್ಲಿ ಕನಿಷ್ಠ 1,000 ವರ್ಷಗಳಿಂದ ಅಭ್ಯಾಸದಲ್ಲಿದೆ. ಜನರು ಡಿಪಾರ್ಟ್ಮೆಂಟ್ ಸ್ಟೋರ್, ಕೆಫೆ, ರೆಸ್ಟೋರೆಂಟ್ ಅಥವಾ ನಗರದ ಪಾದಚಾರಿ ಮಾರ್ಗದಲ್ಲಿ ಚಿಕ್ಕ ನಿದ್ರೆ ಮಾಡಬಹುದು. ಕಚೇರಿಯಲ್ಲಿ ನಿದ್ರೆ ಮಾಡಿದ್ರೆ ತುಂಬಾ ದಣಿದಿದ್ದೀರಿ ಎಂದು ಭಾವಿಸುತ್ತಾರೆ.
ಆರೋಗ್ಯ ತಜ್ಞರ ಪ್ರಕಾರ, ರಾತ್ರಿ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ಜೀವಿತಾವಧಿ ಕಡಿಮೆಯಾಗುತ್ತದೆ. ನಿದ್ರಾಹೀನತೆಯಿಂದ 900 ಗ್ರಾಂ ವರೆಗೆ ತೂಕ ಹೆಚ್ಚಾಗುತ್ತದೆ. ಆಹಾರವನ್ನು ತಿನ್ನದೆ 2 ತಿಂಗಳು ಬದುಕಬಹುದು. ಆದ್ರೆ ನಿದ್ರೆ ಇಲ್ಲದೆ ಕೇವಲ 11 ದಿನ ಮಾತ್ರ ಬದುಕಬಹುದು ಎಂದು ತಜ್ಞರು ಹೇಳಿದ್ದಾರೆ.