ಟೊಮೆಟೋ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಟೊಮೆಟೊ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಚಳಿಗಾಲದಲ್ಲಿ ಇದನ್ನು ಪ್ರತಿದಿನ ಸೇವನೆ ಮಾಡಬೇಕು. ಚಳಿಗಾಲದಲ್ಲಿ ಹಸಿ ಟೊಮೇಟೊ ತಿಂದರೆ ದೇಹವು ಹೈಡ್ರೇಟ್ ಆಗಿರುತ್ತದೆ. ಇದು ದೇಹಕ್ಕೆ ಹೇರಳವಾದ ಬಹುಪೋಷಕಾಂಶಗಳನ್ನು ಒದಗಿಸುತ್ತದೆ.
ಹೃದಯಕ್ಕೆ ಪ್ರಯೋಜನಕಾರಿ – ಟೊಮೆಟೊಗಳಲ್ಲಿ ಲೈಕೋಪೀನ್ ಸಮೃದ್ಧವಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಹೃದ್ರೋಗಕ್ಕೆ ತುಂಬಾ ಒಳ್ಳೆಯದು. ಇದು ಹೃದ್ರೋಗದ ಅಪಾಯವನ್ನು ಶೇ.14 ರಷ್ಟು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ದೇಹದಲ್ಲಿ HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.
ಸಕ್ಕರೆ ಕಾಯಿಲೆ ನಿಯಂತ್ರಣ – ಮಧುಮೇಹ ರೋಗಿಗಳು ಪ್ರತಿದಿನ 1 ಹಸಿ ಟೊಮೆಟೊವನ್ನು ತಿನ್ನಬೇಕು. ಟೊಮೆಟೊದಲ್ಲಿ ಕಂಡುಬರುವ ಲೈಕೋಪೀನ್ ಇನ್ಸುಲಿನ್ ಕೋಶಗಳನ್ನು ಸುಧಾರಿಸುತ್ತದೆ. ಇದು ಜೀವಕೋಶಗಳನ್ನು ಒಡೆಯದಂತೆ ರಕ್ಷಿಸುತ್ತದೆ. ದೇಹದಲ್ಲಿನ ಊತವನ್ನು ಸಹ ಕಡಿಮೆ ಮಾಡುತ್ತದೆ. ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಟೊಮೆಟೊ ನಮ್ಮ ದೇಹದ ಫೈಬರ್ ಮೆಟಬಾಲಿಕ್ ದರವನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹವನ್ನು ಕಡಿಮೆ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ – ಟೊಮೆಟೊ ರಸವು ವಿಟಮಿನ್ ಸಿಯನ್ನು ಹೇರಳವಾಗಿ ಹೊಂದಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಬೀಟಾ-ಕ್ಯಾರೋಟಿನ್ ಅನ್ನು ಸಹ ಹೊಂದಿದೆ. ಸಂಶೋಧನೆಯ ಪ್ರಕಾರ ಟೊಮೆಟೊ ರೋಗನಿರೋಧಕ ಕೋಶಗಳನ್ನು ಹೆಚ್ಚಿಸುತ್ತದೆ. ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದು ವೈರಸ್ ಅನ್ನು ತಡೆಯುವ ನೈಸರ್ಗಿಕ ಕೋಶಗಳನ್ನು ಹೊಂದಿರುತ್ತದೆ.
ಮಲಬದ್ಧತೆ ತಡೆಯಲು ಸಹಕಾರಿ – ಟೊಮೆಟೋಗಳಲ್ಲಿ ಸಾಕಷ್ಟು ಫೈಬರ್ ಇರುತ್ತದೆ. ಇದರಲ್ಲಿ ಕರಗುವ ಮತ್ತು ಕರಗದ ಸಂಯುಕ್ತಗಳಿವೆ. ಹಾಗಾಗಿ ಇದು ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ಒಂದು ಟೊಮೆಟೊ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.