alex Certify ಈ ʼಆಹಾರʼ ಸೇವಿಸಿದರೆ ಮಾಸುವುದು ಮುಖದ ಕಾಂತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼಆಹಾರʼ ಸೇವಿಸಿದರೆ ಮಾಸುವುದು ಮುಖದ ಕಾಂತಿ

ಮುಖದಲ್ಲಿ ಮೊಡವೆಗಳು ಮೂಡಿದರೆ ಮುಖದ ಸೌಂದರ್ಯ ಹಾಳಾಗುತ್ತದೆ. ಇದರಿಂದ ಮುಖ ನೋಡಲು ಸುಂದರವಾಗಿ ಕಾಣಿಸುವುದಿಲ್ಲ.

ಈ ರೀತಿ ಆಗಬಾರದಂತಿದ್ದರೆ ಮೊಡವೆಗಳು ಮೂಡಲು ಕಾರಣವಾಗುವಂತಹ ಹಾಗೂ ಮುಖ ಕಳಾಹೀನಾವಾಗಲು ಕಾರಣವಾಗುವ ಈ ಆಹಾರ ಪದಾರ್ಥಗಳನ್ನು ದೂರವಿಡಬೇಕು.

* ಮಸಾಲೆಯುಕ್ತ ಆಹಾರದಿಂದ ದೂರ ಇರುವುದು ಒಳ್ಳೆಯದು. ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ರಕ್ತನಾಳಗಳನ್ನು ಹಿಗ್ಗಿಸುತ್ತದೆ.

* ಕಾಫಿಯಲ್ಲಿರುವ ಕೆಫೀನ್ ಒತ್ತಡದ ಹಾರ್ಮೋನನ್ನು ಹೆಚ್ಚಿಸುತ್ತದೆ. ಇದ್ರಿಂದ ಚರ್ಮ ಹಾಳಾಗುತ್ತದೆ. ಮುಖ ಕಪ್ಪಾಗಲು ಶುರುವಾಗುತ್ತದೆ.

* ಬಿಳಿಯ ಬ್ರೆಡ್ ನಿಂದ ಇನ್ಸುಲಿನ್ ಅಂಶ ಹೆಚ್ಚಾಗುತ್ತದೆ. ಹಾಗೂ ಚರ್ಮದಲ್ಲಿರುವ ತೈಲ ಪ್ರಮಾಣ ಹೆಚ್ಚಾಗುತ್ತದೆ. ಜೊತೆಗೆ ಚರ್ಮದ ಹೊಳಪು ಕಡಿಮೆಯಾಗುತ್ತದೆ.

* ಕರಿದ ಪದಾರ್ಥಗಳು ಹಾಗೇ ತಂಪು ಪಾನೀಯಗಳು ಕೂಡ ಆರೋಗ್ಯದ ಜೊತೆಗೆ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...