
ಭಾರತದ ಪ್ರತಿ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ಅನೇಕ ರೋಗಗಳಿಗೂ ಬೆಳ್ಳುಳ್ಳಿ ರಾಮಬಾಣವಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದರೆ, ಕೀಲು ನೋವು ಕಡಿಮೆಯಾಗುತ್ತದೆ. ಹಸಿ ಬೆಳ್ಳುಳ್ಳಿಯನ್ನು ತಿಂದರೆ ಮಾತ್ರ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಬೆಳ್ಳುಳ್ಳಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ದೇಹದ ಅನೇಕ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಬೆಳ್ಳುಳ್ಳಿಯಲ್ಲಿ ಜೀವಸತ್ವಗಳು, ಖನಿಜಗಳು, ಬ್ಯಾಕ್ಟೀರಿಯಾ ವಿರೋಧಿ ಗುಣ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿವೆ. ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ.
ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಕೀಲು ನೋವಿನ ಬಾಧೆ ನಿವಾರಣೆಯಾಗುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ತಿನ್ನಬೇಕು. ಖಂಡಿತವಾಗಿಯೂ ಇದರಿಂದ ಪ್ರಯೋಜನವಾಗುತ್ತದೆ.
ಆಗಾಗ ನಿಮಗೆ ಹಲ್ಲು ನೋವು ಬರುತ್ತಿದ್ರೆ ಹಸಿ ಬೆಳ್ಳುಳ್ಳಿಯನ್ನು ತಿನ್ನಿ. ಇದರಿಂದ ಹಲ್ಲುಗಳು ಸದೃಢವಾಗುತ್ತವೆ. ಹುಳುಕು ಹಲ್ಲಿನ ಸಮಸ್ಯೆ ಕೂಡ ಇರುವುದಿಲ್ಲ. ತೂಕ ಕಡಿಮೆ ಮಾಡುವಲ್ಲಿ ಕೂಡ ಹಸಿ ಬೆಳ್ಳುಳ್ಳಿ ಸಹಕಾರಿಯಾಗಿದೆ. ಪ್ರತಿದಿನ ಹಸಿ ಬೆಳ್ಳುಳ್ಳಿಯನ್ನು ಬಳಸಿದರೆ ತೂಕ ನಿಯಂತ್ರಣಕ್ಕೆ ಬರುತ್ತದೆ, ವೇಗವಾಗಿ ತೂಕ ಇಳಿಸಬಹುದು.
ಕಣ್ಣುಗಳ ಆರೋಗ್ಯಕ್ಕೂ ಇದು ಒಳ್ಳೆಯದು. ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ನಿಮಗೆ ದೃಷ್ಟಿ ದೋಷ ಬರುವುದಿಲ್ಲ. ಕಣ್ಣುಗಳಿಗೆ ಸಂಬಂಧಪಟ್ಟ ಕಾಯಿಲೆಗಳು ಸಹ ಗುಣವಾಗುತ್ತವೆ. ಹಾಗಾಗಿ ಪ್ರತಿದಿನ ಒಂದೆರಡು ಎಸಳು ಹಸಿ ಬೆಳ್ಳುಳ್ಳಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.