ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ತಿಂದರೆ ಅದರಿಂದ ಮತ್ತಷ್ಟು ಪ್ರಯೋಜನ ಪಡೆಯಬಹುದು.
ಆದ್ದರಿಂದ ಯಾವ ಹಣ್ಣನ್ನು ಯಾವ ರೀತಿ ತಿಂದರೆ ಉತ್ತಮ ಎಂಬುದನ್ನು ತಿಳಿಯಿರಿ.
* ಹೊಟ್ಟೆಯಲ್ಲಿ ಸಂಕಟವಾದಾಗ ಕಲ್ಲಂಗಡಿ ಹಣ್ಣು, ಕರ್ಬೂಜ, ಬಾಳೆ ಹಣ್ಣು, ದಾಳಿಂಬೆ ಮುಂತಾದ ತಂಪು ಹಣ್ಣುಗಳನ್ನು ಸೇವಿಸಿದರೆ ಮನಸ್ಸು ಶಾಂತವಾಗುತ್ತದೆ.
* ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸುವ ಬದಲು ಅದು ಇರುವ ರೂಪದಲ್ಲಿಯೇ ಸೇವಿಸಿದರೆ ಉತ್ತಮ.
* ಬೇಸಿಗೆಯಲ್ಲಿ ಐಸ್ ಕ್ಯೂಬ್‌ಗಳ ಮೇಲೆ ಹಣ್ಣಿನ ಹೋಳುಗಳನ್ನು ಹರಿಡಿಸಿಟ್ಟು ತಿಂದರೆ ತಂಪಾಗಿರುತ್ತದೆ.
* ದಾಳಿಂಬೆ, ಕಲ್ಲಂಗಡಿ, ನೇರಳೆ ಮುಂತಾದ ಹಣ್ಣುಗಳಿಗೆ ಉಪ್ಪು ಸವರಿ ತಿಂದರೆ ವಿಶೇಷ ರುಚಿ ಸಿಗುತ್ತದೆ.
* ಪೈನಾಪಲ್, ಪೇರಳೆ ಹಣ್ಣುಗಳಿಗೆ ಉಪ್ಪು ಹಾಗೂ ಖಾರ ಪುಡಿ ಉದುರಿಸಿ ತಿಂದರೆ ರುಚಿ ಜಾಸ್ತಿ.
* ಆಯಾ ಕಾಲಕ್ಕೆ ಬರುವ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಸಕ್ಕರೆ ಕಾಯಿಲೆಯವರಿಗೆ ಎಲ್ಲಾ ಹಣ್ಣುಗಳ ಸೇವನೆ ಸೂಕ್ತವಲ್ಲ. ವೈದ್ಯರು ಸೂಚಿಸಿದ ಹಣ್ಣುಗಳನ್ನು ಮಾತ್ರ ಸೇವಿಸಿದರೆ ಉತ್ತಮ.