ಆಹಾರವು ಬಿಸಿಯಾಗಿದೆಯೋ ಅಥವಾ ತಣ್ಣಗಿದೆಯೋ ಅನ್ನೋದರ ಮೇಲೆ ನಾವೆಷ್ಟು ತಿನ್ನುತ್ತೇವೆ ಎಂಬುದು ಅವಲಂಬಿತವಾಗಿದೆ ಎಂದು ಫ್ರಾನ್ಸ್ನ ಅಧ್ಯಯನವೊಂದು ಹೇಳಿದೆ.
ಕ್ಯಾಲೋರಿ ಅಂಶವು ನಾವು ಸೇವಿಸುವ ಆಹಾರದ ತಾಪಮಾನದ ಮೇಲೆ ಅವಲಂಭಿಸಿರುತ್ತೆ. ಈ ಅಧ್ಯಯನದ ಪ್ರಕಾರ ನಾವು ತಣ್ಣನೆಯ ಆಹಾರಕ್ಕಿಂತ ಬಿಸಿಯಾದ ಆಹಾರದಲ್ಲೇ ಹೆಚ್ಚು ಕ್ಯಾಲೋರಿ ಇದೆ ಎಂದು ಭಾವಿಸಿದ್ದೇವೆ. ಆದರೆ ತಣ್ಣನೆಯ ಆಹಾರವನ್ನ ಆಯ್ಕೆ ಮಾಡಿಕೊಳ್ಳುವವರು ಕ್ಯಾಲೋರಿ, ಕೊಬ್ಬು ಹಾಗೂ ಕಾರ್ಬೋಹೈಡ್ರೇಟ್ನ್ನು ಹೆಚ್ಚಾಗಿ ಸೇವಿಸುತ್ತಾರೆ ಎಂದು ತಿಳಿದು ಬಂದಿದೆ.
ನಮ್ಮ ಮೆದುಳು ಹೀಗೆಕೆ ವರ್ತಿಸುತ್ತದೆ ಎಂದು ತಿಳಿಯಲು ಗ್ರೇನೊಬಲ್ ಎಕೋಲ್ ಡೀ ಮ್ಯಾನೆಜ್ಮೆಂಟ್ನ ಮೂವರು ಸಂಶೋಧಕರು ಫ್ರೆಂಚ್, ಅಮೆರಿಕ ಹಾಗೂ ಬ್ರೆಜಿಲ್ನ 2600 ಮಂದಿಯ ಮೇಲೆ ಸಮೀಕ್ಷೆ ನಡೆಸಿದ್ರು.
ಬೆಚ್ಚಗಿನ ಆಹಾರವನ್ನ ಸಾಮಾನ್ಯವಾಗಿ ಮುಖ್ಯ ಆಹಾರದ ಕ್ರಮದಲ್ಲಿ ಸೇವಿಸುತ್ತೇವೆ. ಅಲ್ಲದೇ ಬೆಚ್ಚಿಗಿನ ಆಹಾರಗಳು ಬೇಗನೇ ಜೀರ್ಣವಾಗುತ್ತವೆ. ಜನರು ಬೆಚ್ಚಗಿನ ಆಹಾರದಲ್ಲಿ ಹೆಚ್ಚಾಗಿ ಸ್ವಾದವನ್ನ ಅರಸುತ್ತಾರೆ ಎಂದು ಅಮಾಂದಾ ಪ್ರುಸ್ಕಿ ಯಾಮಿನ್ ಹೇಳಿದ್ದಾರೆ.