ಚಾಣಕ್ಯನ ಅನೇಕ ನೀತಿಗಳು ಇಂದಿಗೂ ಪರಿಣಾಮ ಬೀರ್ತಾ ಇವೆ. ಚಾಣಕ್ಯ ನೀತಿ ಜೀವನದ ಎಲ್ಲ ಕಷ್ಟಗಳಿಗೂ ದಾರಿ ಹೇಳುತ್ತದೆ. ಚಾಣಕ್ಯ ಅನೇಕ ಶ್ಲೋಕಗಳ ಮೂಲಕ ಸಮಸ್ಯೆಗೆ ಪರಿಹಾರ ಹೇಳಿದ್ದಾರೆ. ಅದೇ ರೀತಿ ನೀರನ್ನು ಯಾವಾಗ ಕುಡಿಯಬೇಕು. ಯಾವ ಸಂದರ್ಭದಲ್ಲಿ ಕುಡಿದ್ರೆ ಸಮಸ್ಯೆ ಎದುರಾಗುತ್ತದೆ ಎಂಬ ವಿಷ್ಯವನ್ನೂ ಚಾಣಕ್ಯ ಹೇಳಿದ್ದಾರೆ.
ಬದುಕಲು ವ್ಯಕ್ತಿಗೆ ಆಹಾರ ಹಾಗೂ ನೀರು ಎರಡೂ ಅವಶ್ಯಕ. ಆಹಾರ ಕೆಲಸ ಮಾಡಲು ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಆಹಾರ ಸರಿಯಾಗಿ ಜೀರ್ಣವಾಗಿಲ್ಲವಾದ್ರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಆಚಾರ್ಯ ಚಾಣಕ್ಯ ಪ್ರಕಾರ ಆಹಾರ ಸೇವಿಸುವ ವೇಳೆ ನೀರು ಕುಡಿಯುವ ಬಗ್ಗೆ ಹೆಚ್ಚಿನ ಗಮನ ನೀಡಬೇಕು.
ಚಾಣಕ್ಯ ನೀತಿ ಪ್ರಕಾರ ಆಹಾರ ಜೀರ್ಣವಾಗುವವರೆಗೂ ನೀರನ್ನು ಕುಡಿಯಬಾರದು. ಊಟದ ಮಧ್ಯೆ ಹಾಗೂ ಊಟವಾದ ತಕ್ಷಣ ನೀರು ಕುಡಿದ್ರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಎನ್ನುತ್ತಾರೆ ಚಾಣಕ್ಯ.
ಊಟವಾದ ಸುಮಾರು ಒಂದರಿಂದ ಎರಡು ಗಂಟೆಯೊಳಗೆ ಆಹಾರ ಜೀರ್ಣವಾಗುತ್ತದೆ. ಇದಾದ ನಂತ್ರ ನೀರು ಕುಡಿದ್ರೆ ಅದು ಅಮೃತಕ್ಕೆ ಸಮ. ಇದ್ರಿಂದ ಹೆಚ್ಚಿನ ಶಕ್ತಿ ಉತ್ಪತ್ತಿಯಾಗುವ ಜೊತೆಗೆ ಅಜೀರ್ಣ, ಮಲಬದ್ಧತೆ, ಗ್ಯಾಸ್ ನಂತ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.