ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೆಲವರು ಪ್ರತಿದಿನ ಕಷಾಯ ತಯಾರಿಸಿ ಕುಡಿಯುತ್ತಾರೆ. ಶುಂಠಿ, ನಿಂಬೆ, ಬೆಳ್ಳುಳ್ಳಿ, ಅರಿಶಿನ, ಅಲೋವೆರಾ ಮುಂತಾದವುಗಳನ್ನು ಸೇರಿಸಿ ಕಷಾಯ ತಯಾರಿಸಿ ಕುಡಿಯುತ್ತಾರೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆಯಂತೆ.
*ಈ ಕಷಾಯ ದೇಹದಲ್ಲಿ ಅತಿಯಾದ ಶಾಖವನ್ನು ಉಂಟುಮಾಡಬಹುದು. ಮತ್ತು ಹೊಟ್ಟೆಯಲ್ಲಿ ಸಮಸ್ಯೆ ಕಾಡಬಹುದು. ಕಷಾಯವನ್ನು ಅತಿಯಾಗಿ ಸೇವಿಸಿದರೆ ಆಂತರಿಕ ರಕ್ತಸ್ರಾವ, ಹೊಟ್ಟೆಯ ಹುಣ್ಣು, ಉಸಿರಾಟದ ಸಮಸ್ಯೆ ಕಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಪೋಷಕಾಂಶಗಳನ್ನು ಹೀರುವಿಕೆ ಕಡಿಮೆಯಾಗಬಹುದು.
*ಅರಶಿನ ಮತ್ತು ಅಲೋವೆರಾ ಯಕೃತ್ತನ್ನು ಹಾನಿಗೊಳಿಸುತ್ತದೆ. ಮತ್ತು ಕಾಮಾಲೆಯಂತಹ ಸೋಂಕುಗಳಿಗೆ ಕಾರಣವಾಗಬಹುದು. ಇದು ರಕ್ತಸ್ರಾವಕ್ಕೂ ಕಾರಣವಾಗಬಹುದು. ಇದು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು.