alex Certify ಪ್ರತಿದಿನ ಕುಡಿದ್ರೆ ಬೆಂಡೆಕಾಯಿ ನೀರು ದೂರವಾಗುತ್ತೆ ಈ 5 ಸಮಸ್ಯೆಗಳು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಕುಡಿದ್ರೆ ಬೆಂಡೆಕಾಯಿ ನೀರು ದೂರವಾಗುತ್ತೆ ಈ 5 ಸಮಸ್ಯೆಗಳು…..!

ಬೆಂಡೆಕಾಯಿ ಬಹುತೇಕ ಎಲ್ಲರೂ ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ತೂಕ ನಷ್ಟಕ್ಕೂ ಪ್ರಯೋಜನಕಾರಿ. ಇದು ಪೋಷಕಾಂಶಗಳ ಖಜಾನೆ. ಇತ್ತೀಚಿನ ದಿನಗಳಲ್ಲಿ ಲೇಡಿಫಿಂಗರ್ ವಾಟರ್ ಕೂಡ ಡಯಟ್ ಟ್ರೆಂಡ್‌ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಪ್ರಯೋಜನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಅನೇಕರು ಲೇಡಿಫಿಂಗರ್ ವಾಟರ್‌ ಸೇವನೆಯ ವಿಡಿಯೋ ಕೂಡ ಪೋಸ್ಟ್ ಮಾಡುತ್ತಿದ್ದಾರೆ. ಬೆಂಡೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ಹಾಕಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯಲಾಗುತ್ತದೆ.

ಪೋಷಕಾಂಶಗಳ ನಿಧಿ

ಬೆಂಡೆಕಾಯಿಯಲ್ಲಿ ಅನೇಕ ಪ್ರಮುಖ ಮತ್ತು ಅಗತ್ಯ ಪೋಷಕಾಂಶಗಳು ಕಂಡುಬರುತ್ತವೆ. ಫೈಬರ್, ವಿಟಮಿನ್ ಸಿ, ಮ್ಯಾಂಗನೀಸ್, ಫೋಲೇಟ್ ಮತ್ತು ಎಂಟಿ-ಒಕ್ಸಿಡೆಂಟ್‌ಗಳು ಇದರಲ್ಲಿವೆ. ಹಾಗಾಗಿ ಬೆಂಡೆಕಾಯಿ ನೀರು ಕುಡಿಯುವುದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ.

ತೂಕ ನಷ್ಟ

ಬೆಂಡೆಕಾಯಿ ನೀರಿನಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಫೈಬರ್ ಇರುತ್ತದೆ. ತೂಕ ನಷ್ಟಕ್ಕೆ ಇದು ಪರಿಣಾಮಕಾರಿ. ದೇಹವನ್ನು ಇದು ಹೈಡ್ರೇಟ್‌ ಆಗಿಡುತ್ತದೆ. ತ್ವರಿತವಾಗಿ ತೂಕವನ್ನು ಕಡಿಮೆ ಮಾಡುತ್ತದೆ.

ಉರಿಯೂತಕ್ಕೆ ಪರಿಹಾರ

ಬೆಂಡೆಕಾಯಿ ನೀರಿನಲ್ಲಿ ಅನೇಕ ರೀತಿಯ ಎಂಟಿ ಒಕ್ಸಿಡೆಂಟ್‌ಗಳಿವೆ.  ಇದು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೆ  ಹೃದ್ರೋಗ, ಮಧುಮೇಹ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ಬೆಂಡೆಕಾಯಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ ಈ ಬಗ್ಗೆ ನಿಖರ ತೀರ್ಮಾನಕ್ಕೆ ಬರಲು ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ.

ಜೀರ್ಣಕ್ರಿಯೆ ಸುಧಾರಣೆ

ಬೆಂಡೆಕಾಯಿಯಲ್ಲಿ ಹೆಚ್ಚಿನ ಫೈಬರ್ ಅಂಶಗಳಲ್ಲಿವೆ. ಕರಗದ ನಾರುಗಳು ಇದರ ನೀರಿನಲ್ಲಿ ಇರುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬೆಂಡೆಕಾಯಿ ನೀರು ಕೆಲವರಿಗೆ ಅನಾನುಕೂಲ ಕೂಡ ಉಂಟುಮಾಡಬಹುದು. ಇದನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಆಗುವ ಸಾಧ್ಯತೆ ಇದೆ. ಈಗಾಗಲೇ ಯಾವುದೇ ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿದ್ದರೆ ಇದನ್ನು ಕುಡಿಯುವ ಮೊದಲು ಆಹಾರ ತಜ್ಞರು ಅಥವಾ ವೈದ್ಯರಿಂದ ಸಲಹೆ ಪಡೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...