alex Certify ಒಂದು ತಿಂಗಳು ಪಿಜ್ಜಾ ತಿನ್ನದಿದ್ದರೆ ನಿಮ್ಮ ದೇಹದಲ್ಲಾಗುತ್ತದೆ ಇಂಥಾ ಬದಲಾವಣೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ತಿಂಗಳು ಪಿಜ್ಜಾ ತಿನ್ನದಿದ್ದರೆ ನಿಮ್ಮ ದೇಹದಲ್ಲಾಗುತ್ತದೆ ಇಂಥಾ ಬದಲಾವಣೆ…!

ಪಿಜ್ಜಾ ಮೂಲತಃ ಇಟಲಿಯ ಆಹಾರ. ಆದರೆ ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಅದರ ಜನಪ್ರಿಯತೆಯು ಬಹಳಷ್ಟು ಹೆಚ್ಚಾಗಿದೆ. ಮಕ್ಕಳು, ಹಿರಿಯರು, ಯುವಕರು ಹೀಗೆ ಪ್ರತಿಯೊಬ್ಬರೂ ಪಿಜ್ಜಾವನ್ನು ಇಷ್ಟಪಡುತ್ತಿದ್ದಾರೆ. ಅನೇಕರಿಗೆ ಎಷ್ಟು ಪ್ರಯತ್ನಿಸಿದರೂ ಈ ಜಂಕ್‌ ಫುಡ್‌ ಬಗೆಗಿನ ಮೋಹ ಕಡಿಮೆಯಾಗುತ್ತಿಲ್ಲ. ಒಂದು ತಿಂಗಳು ಪಿಜ್ಜಾ ತಿನ್ನದಿದ್ದರೆ ನಮ್ಮ ಆರೋಗ್ಯದ ಮೇಲೆ ಯಾವ ರೀತಿ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ.

ಅನಾರೋಗ್ಯಕರ ಆಹಾರ – ಪಿಜ್ಜಾ ಒಂದು ಅನಾರೋಗ್ಯಕರ ಆಹಾರವಾಗಿದೆ, ಇದು ನಮ್ಮ ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಅದನ್ನು ಒಂದು ತಿಂಗಳು ಬಿಟ್ಟಾಗ ನಿಮ್ಮ ಡಯಟ್‌ನಲ್ಲಿ ಕೇವಲ ಆರೋಗ್ಯಕರ ಆಹಾರಗಳಿರುತ್ತವೆ.

ಬೊಜ್ಜು ಪಿಜ್ಜಾ, ಎಣ್ಣೆ ಮತ್ತು ಕ್ಯಾಲೋರಿಗಳಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಒಂದು ತಿಂಗಳ ಕಾಲ ಪಿಜ್ಜಾವನ್ನು ಸೇವಿಸದೆ ಇದ್ದರೆ ಹೆಚ್ಚಿನ ಪ್ರಮಾಣದಲ್ಲಿ ತೂಕವನ್ನು ಕಳೆದುಕೊಳ್ಳಬಹುದು.

ಕೊಲೆಸ್ಟ್ರಾಲ್ ತಡೆಗಟ್ಟಬಹುದು – ದೀರ್ಘಕಾಲದವರೆಗೆ ಪಿಜ್ಜಾವನ್ನು ತಿನ್ನದಿದ್ದರೆ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.  ಇದರಿಂದ ಆರೋಗ್ಯ ಕೂಡ ಸುಧಾರಿಸುತ್ತದೆ.

ಬಿಪಿ ನಿಯಂತ್ರಣ – ಪಿಜ್ಜಾದಲ್ಲಿರುವ ಕೊಬ್ಬಿನಿಂದಾಗಿ ಅಧಿಕ ರಕ್ತದೊತ್ತಡದ ಬರಬಹುದು. ಆದ್ದರಿಂದ ಪಿಜ್ಜಾವನ್ನು ತ್ಯಜಿಸುವುದರಿಂದ ಖಂಡಿತವಾಗಿಯೂ ಬಿಪಿ ನಿಯಂತ್ರಣದಲ್ಲಿರುತ್ತದೆ.

ಹೃದಯ ಸಂಬಂಧಿ ಕಾಯಿಲೆಪಿಜ್ಜಾದಲ್ಲಿರುವ ಮೊಝರೆಲ್ಲಾ  ಚೀಸ್ ಹೃದಯದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಪಿಜ್ಜಾ ಸೇವನೆ ಮಾಡದೇ ಇರುವುದರಿಂದ ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ.

ಮಧುಮೇಹದ ಅಪಾಯ ಕಡಿಮೆಯಾಗುತ್ತದೆಪಿಜ್ಜಾದಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಪಿಜ್ಜಾವನ್ನು ತ್ಯಜಿಸುವ ಮೂಲಕ ಸಕ್ಕರೆ ಕಾಯಿಲೆಯಿಂದ ದೂರವಿರಬಹುದು.

ಜೀರ್ಣಕ್ರಿಯೆ ಸುಧಾರಣೆ – 30 ದಿನಗಳವರೆಗೆ ಪಿಜ್ಜಾವನ್ನು ತ್ಯಜಿಸಿದರೆ, ಜೀರ್ಣಕ್ರಿಯೆಯು ನಿಧಾನವಾಗಿ ಸುಧಾರಿಸಲು ಪ್ರಾರಂಭಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಚರ್ಮದ ಆರೋಗ್ಯ ಸುಧಾರಣೆಹೆಚ್ಚು ಪಿಜ್ಜಾ ತಿನ್ನುವುದರಿಂದ ಚರ್ಮವು ಹೊಳಪು ಕಳೆದುಕೊಂಡು ಮಂದ ತ್ತು ನಿರ್ಜೀವವಾಗಿ ಕಾಣುತ್ತದೆ. ಒಂದು ತಿಂಗಳು ಪಿಜ್ಜಾ ತಿನ್ನದೇ ಇದ್ದರೆ ನಿಮ್ಮ ತ್ವಚೆಯನ್ನು ಸುಧಾರಿಸಬಹುದು.

ಸ್ವಯಂ ನಿಯಂತ್ರಣ ಹೆಚ್ಚಾಗುತ್ತದೆಒಂದು ತಿಂಗಳ ಕಾಲ ಪಿಜ್ಜಾವನ್ನು ತ್ಯಜಿಸಲು ಬಲವಾದ ಇಚ್ಛಾಶಕ್ತಿ ಬೇಕು, ಆದ್ದರಿಂದ ಸ್ವಯಂ ನಿಯಂತ್ರಣವು ಹೆಚ್ಚಾಗುತ್ತದೆ ಮತ್ತು ಭವಿಷ್ಯದಲ್ಲಿ ಆಹಾರದಿಂದ ಅನಾರೋಗ್ಯಕರ ವಸ್ತುಗಳನ್ನು ಹೊರಗಿಡಲು ಸಾಧ್ಯವಾಗುತ್ತದೆ.

ಅರಿವು ಹೆಚ್ಚಾಗುತ್ತದೆಪಿಜ್ಜಾವನ್ನು ತಿನ್ನದೇ ಇದ್ದಾಗ ಆರೋಗ್ಯದಲ್ಲಾದ ಸುಧಾರಣೆಯನ್ನು ಕಂಡಾಗ, ಆರೋಗ್ಯಕರ ಆಹಾರ ಪದ್ಧತಿಗಳ ಬಗ್ಗೆ ಅರಿವು ಹೆಚ್ಚಾಗುತ್ತದೆ. ಅದು ಭವಿಷ್ಯದಲ್ಲಿ ತುಂಬಾ ಉಪಯುಕ್ತವಾಗಬಲ್ಲದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...