alex Certify ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡದಿದ್ರೆ ಕಾಡಬಹುದು ಬೊಜ್ಜಿನ ಸಮಸ್ಯೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡದಿದ್ರೆ ಕಾಡಬಹುದು ಬೊಜ್ಜಿನ ಸಮಸ್ಯೆ…..!

ಬೊಜ್ಜು ಸೌಂದರ್ಯವನ್ನು ಹಾಳು ಮಾಡುವುದಲ್ಲದೆ, ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಈ ಬಗ್ಗೆ ಅಸಡ್ಡೆ ತೋರಿದರೆ ಶೀಘ್ರದಲ್ಲೇ ಸ್ಥೂಲಕಾಯತೆಗೆ ಬಲಿಯಾಗಬಹುದು. ರೋಗಗಳು ನಿಮ್ಮನ್ನು ಸುತ್ತುವರಿಯುತ್ತವೆ. ಸರಿಯಾದ ಆಹಾರ ಮತ್ತು ದಿನಚರಿಯ ಸಹಾಯದಿಂದ ಬೊಜ್ಜಿನ ಸಮಸ್ಯೆಯಿಂದ ಪಾರಾಗಬಹುದು.

ಸೂಕ್ತ ವ್ಯಾಯಾಮ ಮತ್ತು ಆಹಾರದ ನಂತರವೂ ಬಯಸಿದ ಫಲಿತಾಂಶಗಳನ್ನು ಪಡೆಯದಿದ್ದರೆ, ನಿಮ್ಮ ಬೆಳಗಿನ ಅಭ್ಯಾಸಗಳೇ ತೂಕ ಹೆಚ್ಚಾಗಲು ಕಾರಣವಿರಬಹುದು. ಇದಕ್ಕಾಗಿ ಚಿಂತಿಸಬೇಕಾಗಿಲ್ಲ, ಬೆಳಗಿನ ದಿನಚರಿಯನ್ನು ತಪ್ಪದೇ ಪಾಲಿಸಿ. ಕೆಲವೊಂದು ನಿರ್ದಿಷ್ಟ ಕೆಲಸಗಳನ್ನು ಮಾಡಿ.

ಬೆಳಗ್ಗೆ ತಡವಾಗಿ ಏಳುವುದು :

ಕೆಲವರಿಗೆ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಕೂಡ ಲೇಟಾಗಿ ಏಳುವ ಅಭ್ಯಾಸವಿರುತ್ತದೆ. ಇದನ್ನು ತಕ್ಷಣವೇ ಬದಲಾಯಿಸಿ. ಬೇಗ ಮಲಗಿ ಬೇಗ ಏಳುವುದು ಆರೋಗ್ಯಕ್ಕೆ ಒಳ್ಳೆಯದು. ಬೆಳಗ್ಗೆ ಹೆಚ್ಚು ಹೊತ್ತು ಮಲಗಿಯೇ ಇದ್ದರೆ ದೇಹದ ಚಯಾಪಚಯ ವ್ಯವಸ್ಥೆಯು ಹದಗೆಡುತ್ತದೆ. ಇದರಿಂದ ಬೊಜ್ಜು ಹೆಚ್ಚಾಗತೊಡಗುತ್ತದೆ.

ನೀರು ಕುಡಿಯದೇ ಇರುವುದು: ನಮ್ಮ ದೇಹಕ್ಕೆ ದಿನಕ್ಕೆ ಸುಮಾರು 7 ಗ್ಲಾಸ್ ನೀರು ಬೇಕಾಗುತ್ತದೆ. ಬೆಳಗ್ಗೆ ಎದ್ದ ನಂತರ ನೀರು ಕುಡಿಯಬೇಕು. ದೇಹದಿಂದ ವಿಷವನ್ನು ತೆಗೆದುಹಾಕಲು ಮತ್ತು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಇದು ಅಗತ್ಯ. ನೀರು ಕುಡಿಯದೇ ಇದ್ದರೆ ಹೊಟ್ಟೆಯ ಸುತ್ತಲಿನ ಪ್ರದೇಶದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ.ಅದಕ್ಕಾಗಿಯೇ ಬೆಳಗ್ಗೆ 2 ಗ್ಲಾಸ್ ಉಗುರುಬೆಚ್ಚಗಿನ ನೀರು ಕುಡಿಯಿರಿ.

ವ್ಯಾಯಾಮ: ಬೆಳಗಿನ ದಿನಚರಿಯಲ್ಲಿ ವ್ಯಾಯಾಮವನ್ನು ಮರೆಯಬೇಡಿ. ಇದು ದೇಹದ ಸೋಮಾರಿತನವನ್ನು ಹೋಗಲಾಡಿಸುತ್ತದೆ. ದೇಹದ ಕೊಬ್ಬನ್ನು ಸಹ ಇದು ಕಡಿಮೆ ಮಾಡುತ್ತದೆ. ಆದ್ದರಿಂದ ಬೆಳಗ್ಗೆ ವ್ಯಾಯಾಮವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಿ.

ಅಧಿಕ ಸಕ್ಕರೆ ಬೆರೆಸಿದ ಚಹಾ ಅಥವಾ ಕಾಫಿ ಕುಡಿಯುವುದು: ಹೆಚ್ಚಿನವರಿಗೆ ಬೆಳಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಹೆಚ್ಚು ಸಕ್ಕರೆ ಮತ್ತು ಕೆನೆ ಹಾಲು ಹಾಕಿ ಮಾಡಿದ ಟೀ ಅಥವಾ ಕಾಫಿ ಕುಡಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...